2 ವರ್ಷಗಳಿಂದ ಉತ್ತರ ಪ್ರದೇಶದ ಜೈಲಿನಲ್ಲಿದ್ದ ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ ಜಾಮೀನಿನ ಮೇರೆಗೆ ಬಿಡುಗಡೆ; ಜೈಲಿಂದ ಹೊರಗಡೆ ಬಂದ ಬಳಿಕ ಹೇಳಿದ್ದೇನು..?
ಲಖನೌ: ಕಳೆದ 2 ವರ್ಷಗಳಿಂದ ಜೈಲಿನಲ್ಲಿದ್ದ ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ ಜಾಮೀನಿನ ಮೇರೆಗೆ ಉತ್ತರ ಪ್ರದೇಶ ಜೈಲಿನಿಂದ ಹೊರಗೆ ಬಂದಿದ್ದಾರೆ.
ನಿ#ಷೇಧಿತ ಸಂಘಟನೆಯೊಂದಿಗೆ ನಂಟು ಹಾಗು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಅವರನ್ನು 2020ರಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. 2 ವರ್ಷಗಳ ನಂತರ ಇದೀಗ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ.
ಲಖನೌ ನ್ಯಾಯಾಲಯಕ್ಕೆ ನಿನ್ನೆ ಪಿಎಂಎಲ್ ಎ ಕಾಯ್ದೆಯಡಿ ಬಂಧಿತರಾಗಿದ್ದ ಸಿದ್ದಿಕಿ ಕಪ್ಪನ್ ತಲಾ 1 ಲಕ್ಷ ರೂ. ಗಳ ಎರಡು ಶ್ಯೂರಿಟಿಯನ್ನು ಸಲ್ಲಿಸಿದ ನಂತರ ಜಾಮೀನು ಸಿಕ್ಕಿತ್ತು. ಗುರುವಾರ ಬೆಳಗ್ಗೆ 9-15ರ ಸುಮಾರಿನಲ್ಲಿ ಅವರು ಜೈಲಿನಿಂದ ಹೊರಗೆ ಬಂದಿರುವುದಾಗಿ ಲಖನೌ ಜಿಲ್ಲಾ ಕಾರಾಗೃಹದ ಅಧಿಕಾರಿ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪತ್ರಕರ್ತ ಸಿದ್ದಿಕಿ, 28 ತಿಂಗಳ ಬಳಿಕ ತಾನು ಜೈಲಿನಿಂದ ಹೊರಗೆ ಬಂದಿದ್ದೇನೆ. ನನ್ನನ್ನು ಬೆಂಬಲಿಸಿದ ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಜೈಲಿಗೆ ಹೋಗುವಂತೆ ಮಾಡಲಾಗಿತ್ತು. ಇದೀಗ ಸಂತೋಷವಾಗಿ ಜೈಲಿನಿಂದ ಹೊರಗೆ ಬಂದಿದ್ದೇನೆ ಎಂದರು.
ಉತ್ತರಪ್ರದೇಶದ ಹಾಥ್ರಸ್ ಪಟ್ಟಣದಲ್ಲಿ 2020 ಅಕ್ಟೋರ್ 5ರಂದು ದಲಿತ ಮಹಿಳೆಯೊಬ್ಬರ ಮೇಲೆ ನಡೆಸಲಾದ ಸಾಮೂಹಿಕ ಅ#ತ್ಯಾ#ಚಾರ ಮತ್ತು ಕೊ#ಲೆ ಪ್ರಕರಣದ ಸುದ್ದಿಯನ್ನು ಕವರ್ ಮಾಡಲೆಂದು ಹೋಗಿದ್ದಾಗ ಪತ್ರಕರ್ತ ಸಿದ್ದಿಕಿ ಕಪ್ಪನ್ ಹಾಗು ಇತರ 3 ಮಂದಿ ಪತ್ರಕರ್ತರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಈ ವೇಳೆ ಐಟಿ, ಯು#ಎಪಿಎ ಮತ್ತು ಇ#ಪಿಸಿ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕಪ್ಪನ್ ವಿರುದ್ಧ ಪ್ರಕರಣಗಳು ದಾಖಲಾದವು. ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಸಿದ್ದಿಕಿ ಕಪ್ಪನ್ ಮೇಲೆ ಪ್ರಕರಣ ದಾಖಲಿಸಿತ್ತು.