ಮಹಿಳೆ ಕರೆದೆಳೆಂದು ಹೋಗಿ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ಹಣಕ್ಕಾಗಿ ಮತ್ತೆಮತ್ತೆ ಬ್ಲ್ಯಾಕ್ ಮೇಲ್: ಇಬ್ಬರು ಮಹಿಳೆಯರು ಸೇರಿದಂತೆ 6 ಜನರ ಬಂಧನ
ಬೆಂಗಳೂರು: ಜನ ಎಷ್ಟೇ ಬುದ್ದಿವಂತರಾದರೂ ಒಂದಲ್ಲ ಒಂದು ಸುಲಿಗೆಗೆ, ವಂಚನೆಗೆ ಸುಲುಕುವುದು ತಪ್ಪುದಿಲ್ಲ. ಇಲ್ಲೊಬ್ಬ ವ್ಯಕ್ತಿ ತಾಂಗಿಯೇ ಹೋಗಿ ಬಲೆಗೆ ಬಿದ್ದು ಬಿದ್ದು, ವಂಚನೆಗೆ ಒಳಗಾಗಿದ್ದಾನೆ. ಈ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುಲಿಗೆಗೆಗೆ ಒಳಗಾಗಿರುವುದು ನಗರದ ಮುನೇಕೊಳಲು ನಿವಾಸಿ 39 ವರ್ಷದ ಖಾಸಗಿ ಸಂಸ್ಥೆ ಉದ್ಯೋಗಿ. ಸುಲಿಗೆಯಾದ ಹಣ ಲಕ್ಷ ರೂಪಾಯಿ.
ಆನ್‌ಲೈನ್ ಡೇಟಿಂಗ್ ಆ್ಯಪ್‌ನ ಚಂದಾದಾರರಾಗಿದ್ದ ಈ ವ್ಯಕ್ತಿಗೆ ಕರೆ ಮಾಡಿರುವ ಅಪರಿಚಿತ ಮಹಿಳೆ, ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ರಾಯಲ್ ಶೆಲ್ಟರ್ಸ್ ಲೇಔಟ್‌ನಲ್ಲಿರುವ ಮನೆಗೆ ಕರೆದಿದ್ದು, ಈ ವೇಳೆ ಆಕೆಯ 3 ಮಂದಿ ಸಹಚರರು ಮನೆಗೆ ನುಗ್ಗಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ.
ಬಳಿಕ ಮಹಿಳೆಯೊಂದಿಗೆ ಪೋಸ್ ನೀಡುವಂತೆ ಹೇಳಿ ವಿಡಿಯೋ ಚಿತ್ರೀಕರಿಸಿದ್ದು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಸಂತ್ರಸ್ತ ಪುರುಷನಿಂದ ಅವರು 3 ಲಕ್ಷ ರೂಪಾಯಿ ಸುಲಿಗೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆದಿರುವುದು ಮಾರ್ಚ್ 3 ರಂದು, ಆರೋಪಿಗಳು ಮತ್ತೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದಾಗ ಈ ವ್ಯಕ್ತಿ ಮಾರ್ಚ್ 7 ರಂದು ಪೊಲೀಸರಿಗ ದೂರು ನೀಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.