ದುಬಾರಿ ಬೆಲೆಯ ಐಫೋನ್'ಗಳನ್ನೇ ಕಳವು ಮಾಡುತ್ತಿದ್ದ ಮೂವರು ಕಳ್ಳರ ಬಂಧನ
Wednesday, March 22, 2023
ಬೆಂಗಳೂರು: ದುಬಾರಿ ಬೆಲೆಯ ಐಫೋನ್'ಗಳನ್ನೇ ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗೋರಿಪಾಳ್ಯದ ಮಹಮ್ಮದ್ ಸಕ್ಲೈನ್, ಪಾದರಾಯನಪುರದ ಸುಹೇಲ್ ಹಾಗು ಸಾಕೀಬ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಬರೋಬ್ಬರಿ 40 ಐಪೋನ್ ಸೇರಿ 110 ಮೊಬೈಲ್ ಪೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತ 3 ಮಂದಿ ಆರೋಪಿಗಳು ಆರೋಪಿಗಳು ದುಬಾರಿ ಬೆಲೆಯ ಐಫೋನ್ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.ಈ ಮಧ್ಯೆ ವಿವೇಕನಗರದಲ್ಲಿ ನಡೆದಿದ್ದ ಐಪೋನ್ ಕಳವು ಮಾಡಿದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್ ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.