ಪ್ರೀತಿಸುತ್ತಿದ್ದ ಯುವತಿಯನ್ನೇ 16ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದುಕೊಂದ ಪಾಗಲ್ ಪ್ರೇಮಿ
ಬೆಂಗಳೂರು: ಕೆಲವು ವರ್ಷಗಳಿಂದ ಪ್ರೀತಿಸ್ತಿದ್ದ ಯುವತಿಯೊಬ್ಬಳನ್ನು ಯುವಕನೊಬ್ಬ 16 ಬಾರಿ ಚುಚ್ಚಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮುರಗೇಶ್ ಪಾಳ್ಯದ ಎನ್‍ಎಎಲ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಲೀಲಾಪವಿತ್ರಾ (28) ಕೊಲೆಯಾದ ಯುವತಿಯಾಗಿದ್ದು, ದಿವಾಕರ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಇಬ್ಬರೂ ಆಂಧ್ರಪ್ರದೇಶ ಮೂಲದವನಾಗಿದ್ದಾರೆ. ಪ್ರಕರಣ ಸಂಬಂಧ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿವಾಕರ್ನನ್ನು ಬಂಧಿಸಲಾಗಿದೆ.
ಲೀಲಾಪವಿತ್ರಾ ಮತ್ತು ದಿವಾಕರ ಎಂಬವರು ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಲೀಲಾಪವಿತ್ರಾ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಆಕೆ ದಿವಾಕರನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದು, ಇದರಿಂದ ಕೋಪಗೊಂಡ ದಿವಾಕರ, ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯಿಂದ ಕೆಲಸ ಮುಗಿಸಿ ಹೊರ ಬಂದಾಗ ಯುವತಿಯ ಮೇಲೆ ದಾಳಿ ನಡೆಸಿದ್ದಾನೆ. ಸುಮಾರು 16ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.