ಹೊಸ ಲುಕ್ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ! ಹಿಂದೆ ಹೇಗಿದ್ದರು... ಈಗ ಹೇಗಾಗಿದ್ದಾರೆ ನೋಡಿ....
Wednesday, March 1, 2023
ಮುಂಬೈ: ಉದ್ದ ತಲೆ ಕೂದಲು ಮತ್ತು ಗಡ್ಡ ಬಿಡುವ ಮೂಲಕ ಭಾರತ್ ಜೋಡೊ ಯಾತ್ರೆಯ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಿರುವ ರಾಹುಲ್ ಗಾಂಧಿ ಹೊಸ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋಟ್ ಸಖತ್ ವೈರಲ್ ಆಗುತ್ತಿದೆ.
1 ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಕಾರಣ ಹೊಸ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಹೇರ್ ಕಟಿಂಗ್ ಹಾಗು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಬಿಟ್ಟಿದ್ದ ಗಡ್ಡವನ್ನು ಟ್ರಿಮ್ ಮಾಡಿದ್ದಾರೆ. ಜೊತೆಗೆ ಬಿಳಿ ಟೀ ಶರ್ಟ್ ಬದಲಿಗೆ ಸೂಟ್-ಟೈನಲ್ಲಿ ಕಾಣಿಸಿಕೊಂಡಿದ್ದಾರೆ.