ನಿಟ್ಟೆ: ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿಯ ಬಂಧನ
Friday, March 17, 2023
ಕಾರ್ಕಳ: ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ರವರ ಮನೆಯ ಐದೂವರೆ ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನೋರ್ವನನ್ನು ಕಾರ್ಕಳ ಪೋಲೀಸರು ಬಂದಿಸಿದ್ದಾರೆ .
ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿಗಳ ತಂಡವು ಆರೋಪಿ ಹುಬ್ಬಳ್ಳಿ ಮಾರುತಿ ನಗರದ 56ವರ್ಷದ ಚಂದ್ರಗೌಡ ಪಾಟೀಲ್ ಎಂಬಾತನನ್ನು ಬಂಧಿಸಿ, ಆತನಿಂದ ಕಳ್ಳತನ ಮಾಡಿದ್ದ 5.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.