ಇದು ನಿಜವಾದ ಮಾನವೀಯತೆ; ಶಾಸಕ ಗಣೇಶ್ ಕುಮಾರ್ ಮಾಡಿದ ಸೇವೆಯನ್ನು ಕೊಂಡಾಡಿದ ಜನ

ಇದು ನಿಜವಾದ ಮಾನವೀಯತೆ; ಶಾಸಕ ಗಣೇಶ್ ಕುಮಾರ್ ಮಾಡಿದ ಸೇವೆಯನ್ನು ಕೊಂಡಾಡಿದ ಜನ

 


ಕೇರಳದ ಪದ್ಮನಾಭಪುರಂ ಕ್ಷೇತ್ರದ ಶಾಸಕ ಗಣೇಶ್ ಕುಮಾರ್ ( ಮಾಜಿ ಸಿನಿಮಾ ನಟ) ಮಾನವೀಯ ಸ್ಪಂದನದ ವಿಷಯದಲ್ಲಿ ಸುಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಇವರು ಮಾಡಿದ ಒಂದು ಸೇವೆ ನಿಜಕ್ಕೂ ರೋಚಕ, ಅದ್ಭುತ. ನಮ್ಮ ಕರ್ನಾಟಕದ ಯಾರಾದರೊಬ್ಬ ಶಾಸಕನಿಗೆ ಗಣೇಶ್ ಕುಮಾರ್ ರವರ ನೂರರಲ್ಲೊಂದು ಗುಣವಾದರೂ ಇದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ.

 ಪದ್ಮನಾಭಪುರಂ ನಿವಾಸಿ ಬಡ ಮುಸ್ಲಿಮ್  ಮಹಿಳೆಯೊಬ್ಬರು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ಆಫರೇಶನ್ ಗೊಳಗಾಗಿ ಗಾಯ  ಒಣಗದೆ ತೀವ್ರ ಕಷ್ಟಕ್ಕೊಳಗಾಗಿದ್ದರು.

 ಗಾಯ ಉಲ್ಬಣಗೊಂಡು ತೀವ್ರ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯ ಸಮಸ್ಯೆಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ  ವೈದ್ಯರು ಸ್ಪಂದಿಸದೆ ಅಕ್ಷಮ್ಯ ನಿರ್ಲಕ್ಷ್ಯ ತೋರಿದ್ದರಿಂದ ಮಹಿಳೆಯ ಪಾಡು ಹೇಳತೀರದಾಗಿತ್ತು.

ಆಸು ಪಾಸಿನ ಕೆಲವರು ಶೀಬಾ ಎಂಬ ಮಹಿಳೆಯ ಅವಸ್ಥೆಯ ಬಗ್ಗೆ  ವೈದ್ಯರ ಗಮನಕ್ಕೆ ತಂದಾಗ ಐದು ವರ್ಷ ಗಳ ಕಾಲ ಗಾಯ ಒಣಗುವ ಛಾನ್ಸೇ ಇಲ್ಲ ಎಂದು ಹೇಳಿ ವೈದ್ಯರೆಲ್ಲ ಕೈ ಚೆಲ್ಲಿದ್ದರು.

ಈ ವಿಷಯ ಸ್ಥಳೀಯ ಶಾಸಕರಾದ ಗಣೇಶ್ ಕುಮಾರ್ ರವರ ಗಮನಕ್ಕೆ ಬಂದಾಗ ಅವರು ಮಹಿಳೆಯ ಮನೆಗೆ ಬೇಟಿ ಕೊಟ್ಟರು. ಮಹಿಳೆಯ ಪರಿತಾಪಕರ ಸ್ಥಿತಿಯನ್ನು ಕಂಡು ಮರುಗಿದ ಅವರು ಕೇರಳ ವಿಧಾನ ಸಭೆಯಲ್ಲಿ ಈ ಪ್ರಸ್ತಾಪವನ್ನೆತ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜಿನ ವೈದ್ಯರ ಬೇಜವಾಬ್ದಾರಿತನವನ್ನು ಟೀಕಿಸಿ  ಸರಕಾರವನ್ನೂ ತರಾಟೆಗೆ ತೆಗೆದು ಕೊಂಡರು.

ಅಷ್ಟಾದಾಗ ವಿಷಯ ರಾಜ್ಯದಾದ್ಯಂತ ಚರ್ಚೆಯಾಯಿತು. ಮೆಡಿಕಲ್ ಮಾಫಿಯಾ ಕೂಡಾ ಹೆಡೆಯೆತ್ತಿ ತನ್ನ ಸಮರ್ಥನೆ ಹಾಗೂ ಗಣೇಶ್ ಕುಮಾರ್ ರನ್ನು ಟೀಕಿಸತೊಡಗಿತು. ಮೆಡಿಕಲ್ ಮಾಫಿಯಾದಿಂದ ಪಗಾರ ಪಡಕೊಂಡ ಕೆಲವು ಮಾಧ್ಯಮಗಳೂ ಗಣೇಶ್ ಕುಮಾರ್ ರನ್ನು ಟೀಕಿಸಿದವು. 

 ಆದರೆ ವಿಚಲಿತರಾಗದ ಗಣೇಶ್  ಕುಮಾರ್ ಹೋರಾಟವನ್ನೇ ಮಾಡಿದರು. ಕೊನೆಗೆ ಎರ್ನಾಕುಳಂ ಮೆಡಿಕಲ್ ಕಾಲೇಜು ಆಸ್ಪತ್ರೆಯವರು ಮಹಿಳೆಯ ಚಿಕಿತ್ಸೆಯನ್ನು ಉಚಿತವಾಗಿ ವಹಿಸಿಕೊಂಡು ತೀವ್ರ ನಿಗಾ ಘಟಕದಲ್ಲಿರಿಸಿ ಸೂಕ್ತ ಚಿಕಿತ್ಸೆ ನೀಡಿದರು. ಇದರಿಂದ ಮಹಿಳೆ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದರು. 

ಮೆಡಿಕಲ್ ಮಾಫಿಯಾ ಮತ್ತು  ಐದು ವರ್ಷ ಕಾಲ ಗಾಯ ಒಣಗಲು ಸಾಧ್ಯವೇ ಇಲ್ಲ ಎಂದು ಮಾಫಿಯಾದ ಪರವಾಗಿ ಲೇಖನಗಳನ್ನು ಪ್ರಕಟಿಸಿದ್ದ ಗೋದಿ ಮಾಧ್ಯಮಗಳು ತಲೆ ತಗ್ಗಿಸುವಂತಾಯಿತು. ಶಾಸಕರು ಕೇರಳವಿಡೀ ಪ್ರಶಂಸೆಗೆ ಪಾತ್ರರಾದರು.

 ಮೊನ್ನೆ ರಮಳಾನ್ ಕೊನೆಯಾಗುವ ಸಂದರ್ಭದಲ್ಲಿ ಶಾಸಕ ಗಣೇಶ್ ಕುಮಾರ್ ಸಪತ್ನೀಕರಾಗಿ ಮಹಿಳೆಯ ಮನೆಗೆ ಭೇಟಿ ನೀಡಿ ಮಹಿಳೆ  ಮತ್ತು ಅವರ ಪ್ರಾಯದ ತಾಯಿ ಹೂಗೂ ಕುಟುಂಬದವರಿಗೆ  ಪೆರ್ನಾಲ್ ಉಡುಗೊರೆಗಳನ್ನೂ  ಮಹಿಳೆಯ ಕೈಗೆ ಹಣವನ್ನೂ ಕೊಟ್ಟು ಹೊರಟು ಹೋದರಲ್ಲದೆ ಹರಕು ಮುರುಕು ಮನೆಯಲ್ಲಿ ವಾಸಿಸುತ್ತಿರುವ ಮಹಿಳೆಗೆ  ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿಯೂ  ಹೇಳಿದರು.

ಗಣೇಶ್ ಕುಮಾರ್ ಮತ್ತು ಪತ್ನಿ ಆ ಮನೆಗೆ ತಲುಪಿದಾಗ ಶೀಬಾ ಎಂಬ ಆ ಮಹಿಳೆ ಮತ್ತು ಅವರ ತಾಯಿ ಭಾವುಕರಾಗಿ ಕಣ್ಣೀರು ಸುರಿಸುತ್ತಾ ಕೃತಜ್ಞತೆ ಮತ್ತು ಪ್ರಾರ್ಥನೆ ಮಾಡಿದ ದೃಶ್ಯ ಮನಕಲಕುವಂತಿತ್ತು. 

ನೆರವು ದೊರೆತ ಅಸಹಾಯಕರಾದ ಬಡವರ ಕೃತಜ್ಞತೆ ಮತ್ತು ಪ್ರಾರ್ಥನೆ ಇದೆಯಲ್ಲಾ!  ನಿಜಕ್ಕೂ ಅದು ಜನನಾಯಕನೊಬ್ಬನಿಗೆ ಸಿಗುವ ಅತಿ ದೊಡ್ಡ ಪ್ರಶಸ್ತಿ. 

" ನನಗೆ ಮೆಡಿಸಿನ್ ಬಗ್ಗೆ ಅರಿವು ಇಲ್ಲ ಎಂದು ಮೆಡಿಕಲ್ ಮಾಫಿಯಾದವರು ಬರೆಸಿದರು.  ಹೌದು, ನಾನು ಅರಿವು ಇಲ್ಲದವನೇ. ಆದರೆ ನನಗೆ ನೋವು ಅರ್ಥವಾಗುತ್ತೆ. ಅದಕ್ಕೆ ದೊಡ್ಡ ಫಿಲಾಸಫಿ ಕಲಿಯಬೇಕಿಲ್ಲ " ಎಂಬ ಗಣೇಶ್ ಕುಮಾರ್ ರವರು ಆ ಸಂದರ್ಭದಲ್ಲಿ ಆಡಿದ ಮಾತು ಮಾರ್ಮಿಕವಾಗಿತ್ತು‌. ಭ್ರಷ್ಟ ಮಾಫಿಯಾಗಳ ಹೃದಯಕ್ಕೆ ನಾಟಿದ ಈಟಿಯಾಗಿತ್ತು. 

 ಭಾರತದಲ್ಲಿ ಬೇಕಾದ್ದು ಇಂತಹ ರಾಜಕಾರಣಿಗಳು. ಗಣೇಶ್ ಕುಮಾರ್ ಗೆ ಜಗದೊಡೆಯನಿಂದ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತಾ ಮನತುಂಬಿದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

 - ಡಿ‌. ಐ. ಅಬೂಬಕರ್ ಕೈರಂಗಳ


Ads on article

Advertise in articles 1

advertising articles 2

Advertise under the article