ಪ್ರೇಯಸಿಯ ಹುಟ್ಟುಹಬ್ಬಕ್ಕೆ ಕೇಕ್ ತಂದು ಕತ್ತರಿಸಿ ಕತ್ತು ಕೊಯ್ದ ಕೊಲೆ ಮಾಡಿದ ಪ್ರಿಯಕರ; ಹತ್ಯೆಗೆ ಕಾರಣವೇನು ಗೊತ್ತೇ..?
ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬಕ್ಕೆ ಕೇಕ್ ತಂದು ಕತ್ತರಿಸಿ ಸಂಭ್ರಮಿಸಿದ ಬಳಿಕ ಪ್ರಿಯಕರ ಆಕೆಯ ಕತ್ತು ಕೊಯ್ದ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ನವ್ಯ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಪ್ರಶಾಂತ್ ಎಂಬಾತನೇ ಈ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಇಬರಿಬ್ಬರು ಕನಕಪುರ ಮೂಲದ ದೂರ ಸಂಬಂಧಿಕರೆಂದು ಹೇಳಲಾಗಿದೆ. ನವ್ಯ ಬೇರೆಯವರೊಂದಿಗೆ ಮೊಬೈಲಿನಲ್ಲಿ ಚಾಟ್ ಮಾಡುತ್ತಿದ್ದರಿಂದ ಬೇರೆಯವರೊಂದಿಗೆ ಆಕೆಗೆ ಸಂಬಂಧವಿದೆ ಎಂಬ ಸಂಶಯದ ಅನುಮಾನದಿಂದ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ, ಕಳೆದ 6 ವರ್ಷಗಳಿಂದ ಪ್ರಶಾಂತ್'ನನ್ನ ಪ್ರೀತಿಸುತ್ತಿದ್ದಳು. ಕಳೆದ ಮಂಗಳವಾರ ನವ್ಯಳ ಹುಟ್ಟುಹಬ್ಬವಿದ್ದ ವೇಳೆ ಪ್ರಶಾಂತ್ ಬ್ಯುಸಿ ಇದ್ದ ಕಾರಣ ನಿನ್ನೆ ಹುಟ್ಟುಹಬ್ಬವನ್ನು ಆಚರಿಸಲು ಕೇಕ್'ನೊಂದಿಗೆ ಬಂದಿದ್ದ. ರಾತ್ರಿ ಕೇಕ್ ಕತ್ತರಿಸಿ ತಿನ್ನಿಸಿದ್ದ ಪ್ರಶಾಂತ್, ಬಳಿಕ ಹರಿತವಾದ ಚಾಕುವಿನಿಂದ ನವ್ಯಳ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವ್ಯಾಳನ್ನು ಕೊಲೆ ಮಾಡಿದ ಬಳಿಕ ಮುಂದೇನು ಮಾಡಬೇಕು ಎಂದು ತೋಚದ ಪ್ರಶಾಂತ್, ಬರೊಬ್ಬರಿ 4 ಗಂಟೆ ಆಕೆಯ ಶವದ ಪಕ್ಕದಲ್ಲೇ ಕುಳಿತಿದ್ದ. ಬಳಿಕ ಸಮೀಪದ ಠಾಣೆಗೆ ತಾನು ಮಾಡಿದ ಕೃತ್ಯವನ್ನು ತಿಳಿಸಿ ಶರಣಾಗಿದ್ದಾನೆ.