ಎಪ್ರಿಲ್ 17ರಂದು SDPI ಕಾಪು ಅಭ್ಯರ್ಥಿ ಮಹಮ್ಮದ್ ಹನೀಫ್ ಮೂಳೂರು ನಾಮ ಪತ್ರ ಸಲ್ಲಿಕೆ
Friday, April 14, 2023
ಕಾಪು : ಕ್ಷೇತ್ರದ SDPI ಅಭ್ಯರ್ಥಿ ಮಹಮ್ಮದ್ ಹನೀಫ್ ಮೂಳೂರು ಎಪ್ರಿಲ್ 17ರಂದು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಎಸ್ ಡಿ ಪಿ ಐ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಬ್ದುಲ್ ರಝಾಕ್ ವೈ ಎಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 10ಕ್ಕೆ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಹೆಜಮಾಡಿಯಿಂದ ಪಡುಬಿದ್ರಿ, ಕಂಚಿನಡ್ಕ, ಉಚ್ಚಿಲ, ಮೂಳೂರು, ಬೆಳಪು, ಮಜೂರು, ಮಾರ್ಗವಾಗಿ ಬೈಕ್ ರಾಲಿಯ ಮೂಲಕ ಹನೀಫ್ ಮೂಳೂರು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ಮಹಮ್ಮದ್ ಹನೀಫ್ ಮೂಳೂರು ಅವರಂತಹ ನಾಯಕರನ್ನು ವಿಧಾನಸೌಧಕ್ಕೆ ಕಳಿಸಲು ಕಾಪು ಜನತೆ ಈ ಬಾರಿ ಒಮ್ಮತದ ತೀರ್ಮಾನ ಮಾಡಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.