
ಉಡುಪಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಈ ಬಾರಿ ನನ್ನನ್ನು ಗೆಲ್ಲಿಸಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತಯಾಚನೆ
ಉಡುಪಿ: ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ರವಿವಾರ ಬೆಳಗ್ಗಿನಿಂದಲೇ ತನ್ನ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದು, ಬ್ರಹ್ಮಾವರ ಸುತ್ತಮುತ್ತ ತೆರಳಿ ಈ ಬಾರಿ ತಮಗೆ ಒಂದು ಅವಕಾಶ ನೀಡುವಂತೆ ಮತ ಯಾಚಿಸಿದರು.
ಉಡುಪಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಜೊತೆಗೆ ಎಲ್ಲರ ಕಷ್ಟಗಳಿಗೆ ತಾನು ಧ್ವನಿ ಆಗಲು ನನ್ನನ್ನು ಈ ಬಾರಿಯ ಚುನಾವಣೆಯಲ್ಲಿ ವಿಜಯಶಾಲಿಯನ್ನಾಗಿ ಮಾಡುವಂತೆ ಪ್ರಸಾದ್ ರಾಜ್ ಕಾಂಚನ್ ಮತಯಾಚನೆಯ ವೇಳೆ ವಿನಂತಿಸಿದರು.
ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಬ್ರಹ್ಮಾವರ ಬ್ಲಾಕ್ ನ ಕರ್ಜೆ,ತಡಾಲು,ಕಂಪಾ, ಕೆಳಬೆಟ್ಟು ಕಾಲೋನಿಯ ವಾರ್ಡ್ ನಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಶೆಟ್ಟಿ ಮೈರ್ಮಾಡಿ ನೇತೃತ್ವದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮವು ಇಂದು ನಡೆಯಿತು.
ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್, ಸುಧಾಕರ್ ಶೆಟ್ಟಿ ಮೈರ್ಮಾಡಿ, ರಾಘವೇಂದ್ರ ಶೆಟ್ಟಿ,ವೆಂಕಟಕೃಷ್ಣ ಗೋಳಿ, ಹರೀಶ್ ಶೆಟ್ಟಿ, ಭುವನೇಶ ನಾಯ್ಕ್, ಪ್ರಭಾಕರ್ ಪೂಜಾರಿ, ಗೀತಾ,ಸುಗುಣ,ಗೀತಾ ,ಸುಧೀರ್ ಪೂಜಾರಿ, ಬಾಲಕೃಷ್ಣ, ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.