1 ಕೆಜಿ ತೂಕದಷ್ಟು ಗಾಂಜಾ ಕಳ್ಳಸಾಗಣೆ: ತಮಿಳುನಾಡು ಮೂಲದ ಭಾರತೀಯನನ್ನು ಗಲ್ಲಿಗೇರಿಸಿದ ಸಿಂಗಾಪುರ

1 ಕೆಜಿ ತೂಕದಷ್ಟು ಗಾಂಜಾ ಕಳ್ಳಸಾಗಣೆ: ತಮಿಳುನಾಡು ಮೂಲದ ಭಾರತೀಯನನ್ನು ಗಲ್ಲಿಗೇರಿಸಿದ ಸಿಂಗಾಪುರ

ಸಿಂಗಾಪುರ: ಗಾಂಜಾವನ್ನು ಕಳ್ಳಸಾಗಣೆ ಆರೋಪದ ಮೇಲೆ ಭಾರತ ಮೂಲದ ತಂಗರಾಜು ಸುಪ್ಪಯ್ಯ(46) ಎಂಬಾತನನ್ನು ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ ಮಾಡಿದ್ದ ಆರೋಪದ ಮೇರೆಗೆ ಭಾರತದ ತಮಿಳುನಾಡು ಮೂಲದ ತಂಗರಾಜು ಸುಪ್ಪಯ್ಯನಿಗೆ ಅಲ್ಲಿನ ನ್ಯಾಯಾಲಯ 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು.

2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದ ವೇಳೆ ಬಂಧಿಸಲಾಗಿತ್ತು. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ತಂಗರಾಜು ಸುಪ್ಪಯ್ಯ ಬಳಿ ಸಿಕ್ಕಿತ್ತು. 2018ರಲ್ಲಿ ತಂಗರಾಜು ಸುಪ್ಪಯ್ಯಗೆ ಮರಣದಂಡನೆ ವಿಧಿಸಲಾಗಿದ್ದು, ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜು ಸುಪ್ಪಯ್ಯನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿತ್ತಾದರೂ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಬುಧವಾರ ಗಲ್ಲಿಗೇರಿಸಿದೆ. 

Ads on article

Advertise in articles 1

advertising articles 2

Advertise under the article