ಮಂಗಳೂರು ಉತ್ತರ ಕ್ಷೇತ್ರದ, ಜನರ ಅಭಿವೃದ್ಧಿಯೇ ತನ್ನ ಮೂಲ ಮಂತ್ರ ಎಂದ ಇನಾಯತ್ ಅಲಿ; ವಿವಿಧೆಡೆ ಬಿರುಸಿನ ಮತಬೇಟೆ ನಡೆಸಿದ ಕಾಂಗ್ರೆಸ್

ಮಂಗಳೂರು ಉತ್ತರ ಕ್ಷೇತ್ರದ, ಜನರ ಅಭಿವೃದ್ಧಿಯೇ ತನ್ನ ಮೂಲ ಮಂತ್ರ ಎಂದ ಇನಾಯತ್ ಅಲಿ; ವಿವಿಧೆಡೆ ಬಿರುಸಿನ ಮತಬೇಟೆ ನಡೆಸಿದ ಕಾಂಗ್ರೆಸ್

ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಗುರುವಾರ ಬಿರುಸಿನ ಮತಯಾಚನೆ ನಡೆಸಿದ್ದು, ಕ್ಷೇತ್ರದ, ಜನರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಮತದಾರರಿಗೆ ಭರವಸೆ ನೀಡಿದ್ದಾರೆ.

ಎಡಪದವು ಜಂಕ್ಷನ್ ನಲ್ಲಿ ನಡೆಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಇನಾಯತ್ ಅಲಿ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದಾಗಿ‌ ಜನಸಾಮಾನ್ಯರು ಬೆಲೆಏರಿಕೆಯ ಬಿಸಿಯಿಂದ ನರಳುತ್ತಿದ್ದಾರೆ, ಆರ್ಥಿಕ‌ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದಕ್ಕೆಲ್ಲ ಪರಿಹಾರ ಎಂದರೆ ಕಾಂಗ್ರೆಸ್ ಮಾತ್ರ. ಈ ಹಿನ್ನೆಲೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಮತದಾರರಲ್ಲಿ ವಿನಂತಿಕೊಂಡರು. ಈ ವೇಳೆ ಶ್ರೀ ಉಮೇಶ್ ದಂಡಿಕೇರಿ, ಶ್ರೀ ಲಕ್ಷ್ಮಿ ಶಾ ಹಾಗೂ ಪಕ್ಷದ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








ಇದಕ್ಕೂ ಮೊದಲು ಗಂಜಿಮಠ ಮಾರುಕಟ್ಟೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಬದಲಾವಣೆಯಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ.ಅದಕ್ಕೆ ನಮ್ಮ ಪಕ್ಷ ಸನ್ನದ್ಧವಾಗಿದೆ. ಜನರ ಹಿತ ಕಾಯುವುದೇ ನಮ್ಮ ಗುರಿಯಾಗಿದ್ದು, ಜನಪರ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿ,ಕ್ಷೇತ್ರದ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿ ಮತ ನೀಡಿ ಎಂದು ಕೋರಿದರು. 

ಈ ವೇಳೆ  ಕೇರಳದ ಮಾಜಿ ಸಚಿವರಾದ ಎಂ.ಎಂ. ಹಸನ್, ಎನ್‌ಎಸ್‌ಯುಐ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಕೀರ್ತಿ ಗಣೇಶ್ , ಗುರುಪುರ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಬಾಷಾ ಮಾಸ್ಟರ್ ರವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.














ಅದ್ಯಪಾಡಿಯಲ್ಲಿ ಬಹಿರಂಗ ಸಭೆ ನಡೆಸಿದ ಇನಾಯತ್ ಅಲಿ, ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕೆ ನೆಮ್ಮಲ್ಲರ ಸಹಕಾರ ಮುಖ್ಯ ಎಂದು ತಿಳಿಸಿ, ಕಾಂಗ್ರೆಸ್'ಗೆ ಬೆಂಬಲಿಸಿ ಮತ ನೀಡುವಂತೆ ಕೋರಿದರು. ಈ ವೇಳೆ NSUI ಘಟಕದ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ರವರು ಭಾಗಿಯಾಗಿ, ಬೆಂಬಲದ ನುಡಿಗಳನ್ನಾಡಿದರು.

ತುಳುನಾಡಿನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದಾಗಿರುವ ಪೆರಾರದ ಐತಿಹಾಸಿಕ ಶ್ರೀ ಕ್ಷೇತ್ರ ಪೆರಾರ ಬಲವಂಡಿ ದೈವಸ್ಥಾನಕ್ಕೆ ಭೇಟಿ ನೀಡಿದ ಇನಾಯತ್, ಕ್ಷೇತ್ರದ ಜನರಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ವಾಮಂಜೂರಿನ ಸ್ನೇಹ ಮಾರುಕಟ್ಟೆಯಿಂದ ಮುಖ್ಯ ಮಾರುಕಟ್ಟೆ ವ್ಯಾಪ್ತಿಯ ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಮಾರಾಟಗಾರರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಪರಿಹರಿಸುವುದಾಗಿ ಭರವಸೆ ನೀಡಿ ಮತಯಾಚಿಸಿದರು.

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ರವರು ಚುನಾವಣಾ ಪ್ರಚಾರದ ಭಾಗವಾಗಿ ವಾಮಂಜೂರು ಮುಖ್ಯ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜೊತೆಯಾಗಿ ಇನಾಯತ್ ಅಲಿ ಪರ ಅಲ್ಲಿನ ಸ್ಥಳೀಯರಲ್ಲಿ ಮತಯಾಚಿಸಿದರು.

ವಾಮಂಜೂರಿನ ಪ್ರದೇಶದ ಮನೆಗಳಿಗೆ ಭೇಟಿ ಕೊಟ್ಟು, ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ, ಈ ವೇಳೆ ಅಲ್ಲಿನ ಜನರೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ  ಜನಪರ ಆಡಳಿತ ನೀಡುವ ಸಂಕಲ್ಪ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ನಿಮ್ಮ ಆಯ್ಕೆಯಾಗಿರಲಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಅಡ್ಯಾರ್‌ಪದವಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ, ಕ್ಷೇತ್ರದ ಜನರು ಬೆಲೆಯೇರಿಕೆ ಸಮಸ್ಯೆಯಿಂದ ಪರದಾಡುತ್ತಿದ್ದಾರೆ, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಂಗ್ರೆಸ್‌ ಗ್ಯಾರಂಟಿಗಳು ನೆರವಾಗಲಿವೆ, ಉತ್ತಮ ನಾಳೆಗಾಗಿ ಕಾಂಗ್ರೆಸ್‌ಗೆ ಬೆಂಬಲಿಸಿ ಎಂದು ಇನಾಯತ್ ಅಲಿ ಮನವಿ ಮಾಡಿದರು.

ಬೆಳಗ್ಗೆ ಅಡ್ಯಾರ್ ಪದವು ಪ್ರದೇಶದಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು, ಜನರ ಏಳಿಗೆಗೆ ಕಾಂಗ್ರೆಸ್ ಗ್ಯಾರಂಟಿಗಳು ನೆರವಾಗಲಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜನಪರ ಆಡಳಿತ ನೀಡಲು ಬದ್ಧವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್'ಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.

Ads on article

Advertise in articles 1

advertising articles 2

Advertise under the article