
ಕಾಪುವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸುವ ಸಂಕಲ್ಪವಿದ್ದು, ಅದಕ್ಕೆ ನಿಮ್ಮ ಬೆಂಬಲ ಅಗತ್ಯ: ಗುರ್ಮೆ ಸುರೇಶ್ ಶೆಟ್ಟಿ
ಹಿರೇಬೆಟ್ಟು ಕಂಚಿನ ಬೈಲು ಮರಾಠಿ ಸಮಾಜ ಮಂದಿರಕ್ಕೆ ಭೇಟಿ; ಬಡಗುಬೆಟ್ಟು ಆದಿಶೇಷ ನಗರದಲ್ಲಿ ಮತಯಾಚನೆ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಹಿರೇಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ, ಕಂಚಿನ ಬೈಲು ಪ್ರದೇಶದ ಮರಾಠಿ ಸಮಾಜ ಮಂದಿರಕ್ಕೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು, ಶ್ರೀ ಲಾಲಾಜಿ ಮೆಂಡನ್ ಅವರು ತಂದಿರುವ ಅಭಿವೃದ್ಧಿ ಯೋಜನೆಗಳಿಗೆ ಇನ್ನಷ್ಟು ವೇಗ ನೀಡಿ ಕಾಪುವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಬೆಳಸಬೇಕೆಂಬ ಸಂಕಲ್ಪ ಹೊಂದಿದ್ದೇನೆ. ಅದಕ್ಕೆ ನಿಮ್ಮ ಬೆಂಬಲ ಅಗತ್ಯ ದಯವಿಟ್ಟು ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನನನ್ನು ಗೆಲ್ಲಿಸಬೇಕಾಗಿ ಕೇಳಿಕೊಂಡರು.
ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್,ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ,ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ,ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಪಂಚಾಯತ್ ಸದಸ್ಯೆ ವಿನಂತಿ ,ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್,ಪ್ರವೀಣ್ ಪೂಜಾರಿ,ಹಿರೇಬೆಟ್ಟು,ಹಿರಿಯ ಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಸುಂದರ ನಾಯಕ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಬಳಿಕ ಬಡಗು ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ, ಆದಿಶೇಷ ನಗರ 80 ಪ್ರದೇಶದಲ್ಲಿ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್,ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ,ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ,ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್,ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್,ಪ್ರವೀಣ್ ಪೂಜಾರಿ,ಹಿರೇಬೆಟ್ಟು,ಹಿರಿಯ ಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.