
ಚುನಾವಣಾ ಬ್ರೇಕಿಂಗ್ : ಉಡುಪಿ ಜಿಲ್ಲೆಯಲ್ಲಿ BJP ಭಾರಿ ಮುನ್ನಡೆ
Saturday, May 13, 2023
ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ನಡೆಯುತ್ತಿದ್ದು, ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಷ್ಟೇ ಮುನ್ನಡೆಯಲ್ಲಿದೆ.
ಉಡುಪಿಯಲ್ಲಿ ಬಿಜೆಪಿಯ ಯಶಪಾಲ್ ಸುವರ್ಣ, ಕಾಪುವಿನಲ್ಲಿ ಬಿಜೆಪಿಯ ಸುರೇಶ್ ಶೆಟ್ಟಿ ಗುರ್ಮೆ, ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್, ಕುಂದಾಪುರದಲ್ಲಿ ಬಿಜೆಪಿಯ ಕಿರಣ್ ಕೊಡ್ಗಿ ಹಾಗು ಬೈಂದೂರಿನಲ್ಲಿ ಕಾಂಗ್ರೆಸಿನ ಗೋಪಾಲ ಪೂಜಾರಿ ಮುನ್ನಡೆಯಲ್ಲಿದ್ದಾರೆ.