ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಗುರ್ಮೆ ಸುರೇಶ್ ಶೆಟ್ಟಿ; ಮೋದಿಯವರ ಸಾರಥ್ಯದಲ್ಲಿ ಭಾರತವು ವಿಶ್ವಗುರು ಅಗಲಿದೆ
Wednesday, May 3, 2023
ಮೂಲ್ಕಿ: ಕೊಲ್ನಾಡಿನಲ್ಲಿ ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ನರೇಂದ್ರ ಮೋದಿಯವರ ಜೊತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ದೊರೆತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಮುಂದೊಂದುದಿನ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಭಾರತವು ವಿಶ್ವಗುರು ಅಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿಯವರು ಬಜರಂಗದಳದ ನಿಷೇದ ಹಾಗೂ ಗೋಹತ್ಯ ನಿಷೇದ ಕಾಯ್ದೆ ಹಿಂಪಡೆಯುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಗಲು ಕನಸು ಕಾಣಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಕ್ತ ಕರಾವಳಿ ನಮ್ಮ ಗುರಿ ಈ ಕೆಲಸ ನಮ್ಮ ಕಾರ್ಯಕರ್ತರಿಂದ ಸಾಧ್ಯ, ಖಂಡಿತವಾಗಿಯೂ ನಮ್ಮ ಕಾರ್ಯಕರ್ತರು ಈ ಕೆಲಸವನ್ನು ದಡ ಮುಟ್ಟಿಸುತ್ತಾರೆ ಎಂಬುದಾಗಿ ಭರವಸೆ ನೀಡಿದರು.