ಮೆಚ್ಚುಗೆಗೆ ಪಾತ್ರವಾದ  ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರದ ಬಾಲಕಲಾವಿದರು ಪ್ರದರ್ಶಿಸಿದ ಯಕ್ಷಗಾನ ನಾಟ್ಯ ವೈಭವ

ಮೆಚ್ಚುಗೆಗೆ ಪಾತ್ರವಾದ ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರದ ಬಾಲಕಲಾವಿದರು ಪ್ರದರ್ಶಿಸಿದ ಯಕ್ಷಗಾನ ನಾಟ್ಯ ವೈಭವ


ದುಬೈ ‌: ಯುಎಇ ಬಂಟ್ಸ್ ನ ವೇದಿಕೆಯಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಬಾಲಕಲಾವಿದರು ಪ್ರದರ್ಶಿಸಿದ ಯಕ್ಷಗಾನ ನಾಟ್ಯ ವೈಭವ ದೇಶ ವಿದೇಶಗಳ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಇತ್ತೀಚೆಗೆ ದುಬೈನಲ್ಲಿ ನಡೆದ ಯುಎಇ ಬಂಟ್ಸ್ ನ 46 ನೇ ಕೂಡುಕಟ್ಟ್ ನ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಪುಟಾಣಿ ಮಕ್ಕಳು ಮತ್ತು ಬಾಲ ಕಲಾವಿದರು ಅಭಿನಯಿಸಿ ತೋರಿಸಿದ ಯಕ್ಷಗಾನ ನಾಟ್ಯ ವೈಭವವನ್ನು  ನೋಡಿದ ಅತಿಥಿಗಳಾದ ಆಳ್ವಾಸ್ ಸಂಸ್ಥೆಯ ರೂವಾರಿ ಮೋಹನ್ ಆಳ್ವ,ಚಲನಚಿತ್ರ ನಟ ನಿರ್ದೇಶಕ ಶಿವದ್ವಜ್, ಸಿಐಡಿ ಖ್ಯಾತಿಯ ದಯಾ ಶೆಟ್ಟಿ,ಹರೀಶ್ ಶೆಟ್ಟಿ ಮತ್ತು ಮುಂಬಯಿಯ ರಂಗ ಕರ್ಮಿ ಅಶೋಕ್ ಪಕಳ ಮೆಚ್ಚುಗೆಯ ಮಾತುಗಳನ್ನು ಆಡಿದರು. ಮಂಗಳೂರಿನ ಪ್ರತಿಷ್ಠಿತ ಟಿವಿ ಚಾನೆಲ್ ನಲ್ಲಿ ನೇರ ಪ್ರಸಾರಗೊಂಡಿದ್ದು ದೇಶ ವಿದೇಶಗಳಲ್ಲಿ ನಾಟ್ಯ ವೈಭವ ಖ್ಯಾತಿಯನ್ನು ಪಡೆಯಿತ್ತು.










ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರ ಮಾರ್ಗದರ್ಶನದಲ್ಲಿ ಯಕ್ಷ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರ ನಿರ್ದೇಶನದಲ್ಲಿ ಮಾ.ನಿಲೇಶ್ ನಾರಾಯಣ ಶೆಟ್ಟಿ, ಮಾ.ಆದಿತ್ಯ ದಿನೇಶ್ ಶೆಟ್ಟಿ, ಮಾ.ಅಥರ್ವ ವಸಂತ ಶೆಟ್ಟಿ, ಕು.ನವೋಮಿ ಸಾಯಿನಾಥ್ ಶೆಟ್ಟಿ, ಕು.ಪ್ರೀಶ ಸಂತೋಷ್ ಶೆಟ್ಟಿ, ಕು.ಪ್ರಾಪ್ತಿ ಜಯನಂದ ಪಕಳ ಅಭಿನಯಿಸಿದ್ದಾರೆ. ನೈಪಥ್ಯದಲ್ಲಿ ಗಿರೀಶ್ ನಾರಯಣ್,ಬಾಲಕೃಷ್ಣ ಶೆಟ್ಟಿಗಾರ್,ಆನಂದ ಸಾಲ್ಯಾನ್,ಭಾಸ್ಕರ ನೀರುಮಾರ್ಗ ಸಹಕರಿಸಿದರು.

ಗುರುಗಳಾದ ಶರತ್ ಕುಡ್ಲ ಮತ್ತು ಬಾಲಕಲಾವಿದರಿಗೆ ಬಂಟ್ಸ್ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಸಲಹ ಸಮಿತಿಯ ಸದಸ್ಯರಾದ ದಿನೇಶ್ ಶೆಟ್ಟಿ ಕೊಟ್ಟಿಂಜ‌ರವರು ನೆನಪಿನ‌ ಕಾಣಿಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

 ✒️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Ads on article

Advertise in articles 1

advertising articles 2

Advertise under the article