ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಮುಖಂಡರು; ಶಿರೂರು ಹರಿಖಂಡಿಗೆಯಲ್ಲಿ ಮಾತಾಯಾಚನೆ ನಡೆಸಿದ ಬಿಜೆಪಿ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಶಿರೂರು ಹರಿಖಂಡಿಗೆಯಲ್ಲಿ ಮಾತಾಯಾಚನೆ ಮಾಡಿದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮ ನೆರವೇರಿತು.
ಕಾಂಗ್ರೆಸ್ ಪಕ್ಷದಿಂದ ಸಂತೋಷ್ ಕುಲಾಲ್ ಬೈರಂಪಳ್ಳಿ ಮತ್ತು ಕಾಂಗ್ರೆಸ್ ಹಾಗೂ ಶ್ರಮಿಕ ತಂಡ ಬೈರಂಪಳ್ಳಿ ಜಂಟಿಯಾಗಿ ಸಂತೋಷ್ ಪೂಜಾರಿ ಹಾಲಕ್ಕಿ, ಪ್ರೇಮ ಸಂತೋಷ್, ಸೀತಾ ಪೂಜಾರಿ, ಲಲಿತಾ ಪೂಜಾರಿ, ಲಕ್ಷ್ಮಿ, ವನಜಾ, ಬಸವ, ಗುಲಾಬಿ,ಯಶೋದ, ಕೃಷ್ಣ, ಧನರಾಜ್, ದಿನೇಶ್, ಸುಧೀರ್, ಸ್ವಸ್ತಿಕ್, ಶೇಖರ್ ಶೆಟ್ಟಿ, ಗಣೇಶ್,ಸೇರ್ಪಡೆಗೊಂಡರು.
ಈ ಸಂದರ್ಭ ಪೆರ್ಡೂರ್ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ,ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ವಿಜೇತ್ ಕುಮಾರ್ ಬೆಳ್ಳಾರ್ ಪಾಡಿ,ಬೈರಂಪಳ್ಳಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್ ಬಡಗುಬೆಟ್ಟು, ಗ್ರಾಮ ಪಂಚಾಯತ್ ಸದಸ್ಯ ಹರ್ಷಿತ್ ಪೂಜಾರಿ, ಭೂತ್ ಅಧ್ಯಕ್ಷರು ಪ್ರದೀಪ್ ಶೆಟ್ಟಿ, ಪಿಡಬ್ಲ್ಯೂ ಕಂಟ್ರಾಕ್ಟರ್ ಸತೀಶ್ ಶೆಟ್ಟಿ ಕುತ್ಯಾರು ಬೀಡು ಹಾಗೂ ಬಿಜೆಪಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.