ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗಾಗಿ ಮತನೀಡಿ: ವಿವಿಧ ಕಡೆಗಳಲ್ಲಿ ಭರ್ಜರಿ ಮತಬೇಟೆಗಿಳಿದ ಇನಾಯತ್ ಅಲಿ
ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಭರ್ಜರಿ ಮತಬೇಟೆ ನಡೆಸಿದ್ದು, ಮತಯಾಚನೆ ವೇಳೆ ಮಾತನಾಡಿದ ಅವರು, ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಪ್ರಚಂಡ ಬಹುಮತದೊಂದಿಗೆ ನನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಸುಜಿಕಲ್ ಗುಡ್ಡೆಯಲ್ಲಿ ರವಿವಾರ ಸಭೆ ನಡೆಸಿ, ಮಾತನಾಡಿದ ಇನಾಯತ್ ಅಲಿ, ಕ ಕರುನಾಡಿನ ಪ್ರಗತಿಗಾಗಿ ಕಾಂಗ್ರೆಸ್ ಪಣ ತೊಟ್ಟಿದ್ದು, ಜನರ ಸಂಕಷ್ಟಗಳಿಗೆ ಹೆಗಲಾಗಲಿದೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹೊಸ ಬದಲಾವಣೆ ತರಲಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಇದಕ್ಕೂ ಮೊದಲು ಕಾವೂರಿನ ಕೊಂಚಡಿ ಪ್ರದೇಶದ ಮನೆಗಳಿಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ, ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಜನರಲ್ಲಿ ಕೋರಿದರು. ಈ ವೇಳೆ ಕಾಪಿಗುಡ್ಡದ ಶ್ರೀ ಅಯ್ಯಪ್ಪ ಮಂದಿರಕ್ಕೆ ಭೇಟಿ ನೀಡಿ, ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಕಾವೂರಿನ ಮನೆ ಮನೆಗಳಿಗೆ ತೆರೆಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿ, ಕ್ಷೇತ್ರದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಇನಾಯತ್ ಅಲಿ ಮನವಿ ಮಾಡಿದರು.
ಬಂದಲೆಯಲ್ಲಿರುವ ಕಾರಣಿಕ ಕ್ಷೇತ್ರ ಶ್ರೀಮಂತ ರಾಜಗುಳಿಗ ಸನ್ನಿಧಾನಕ್ಕೆ ಭೇಟಿ ಕೊಟ್ಟು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ ಇನಾಯತ್ ಅಲಿ ಅವರು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಕೋಮು ಘರ್ಷಣೆ, ಗಲಭೆ, ಅಮಾಯಕರ ಹತ್ಯೆ, ಹಲ್ಲೆ ಇತ್ಯಾದಿ ಘಟನೆಗಳು ಕಪ್ಪು ಚುಕ್ಕಿಯಾಗಿ ಪರಿಣಮಿಸಿದೆ. ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಭಾವನಾತ್ಮಕ ಕೊಂಡಿ ಕಳಚಿ ಬೀಳದಂತೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಶಾಂತಿ, ಸೌಹಾರ್ದತೆಯ ಹೊಸ ನಾಡನ್ನು ಕಟ್ಟಬೇಕು. ಈ ದೃಷ್ಟಿನಿಂದ ನನ್ನ ಗೆಲುವಿಗಾಗಿ ಎಲ್ಲರೂ ಸಹಕರಿಸಿ ಎಂದರು.
ಸುರತ್ಕಲ್ ಚರ್ಚ್, ಬೋಂದೆಲ್ ಚರ್ಚ್, ಗುರುಪುರ ಚರ್ಚ್, ಕೆಲರಾಯ್ ಚರ್ಚ್, ಪಾಲ್ದನೆ ಚರ್ಚ್, ನೀರುಮಾರ್ಗದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ಕೊಟ್ಟು ಪ್ರಾರ್ಥಿಸಿದರು.
ಬಳಿಕ ಕೋಡಿಕಲ್, ಮುಲ್ಲಕಾಡು, ಕೊಂಚಾಡಿ, ಪದವು ವಾರ್ಡ್ ನಲ್ಲಿ ಮನೆ ಮನೆ ಭೇಟಿ ಕೊಟ್ಟು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಈ ವೇಳೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಅಶ್ರಫ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮತ್ತಿತರರು ಉಪಸ್ಥಿತರಿದ್ದರು.