ಗೋಪಾಲಪುರ ವಾರ್ಡ್'ನಲ್ಲಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
Thursday, May 4, 2023
ಉಡುಪಿ: ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರು ಗೋಪಾಲಪುರ ವಾರ್ಡ್ ನಲ್ಲಿ ಕಾಂಗ್ರೆಸ್ ಮುಂಖಡರಾದ ಪ್ರಶಾಂತ ಪೂಜಾರಿ ನೇತೃತ್ವದಲ್ಲಿ ಬೃಂದಾವನ ಲೇಔಟ್ (ಪಟ್ಟುಕೆರೆ), ನಯಂಪಳ್ಳಿ ಕಮಲ ಕಾಂಪೌಂಡ್ ರಸ್ತೆಯ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಯನಂದ, ಪುರಂದರ, ಪ್ರದೀಪ್, ತುಳಸಿ, ಐರಿನ್, ಶಾಲಿನಿ ಹಾಗೂ ಹಿರಿಯರು, ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.