ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಡ ಜನರಿಗೆ ಎಲ್ಲಾ ವ್ಯವಸ್ಥೆ ಸಿಗುವಂತೆ ಮಾಡುತ್ತೇನೆ; ಮೂಲಭೂತ ಸೌಕರ್ಯವನ್ನು ಒದಗಿಸಲು ಮುತುವರ್ಜಿ ವಹಿಸುತ್ತೇನೆ: ಕೆಮ್ಮಣ್ಣು, ಕಳ್ತೂರಿನ ಗೇರುಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿ ಮತಯಾಚಿಸಿದ ಪ್ರಸಾದ್ ರಾಜ್ ಕಾಂಚನ್
Thursday, May 4, 2023
ಉಡುಪಿ: “ 94C ಸಿಗದಿದ್ದವರಿಗೆ 6 ತಿಂಗಳ ಒಳಗೆ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಡ ಜನರಿಗೆ ಎಲ್ಲಾ ವ್ಯವಸ್ಥೆ ಸಿಗುವಂತೆ ಮಾಡುತ್ತೇನೆ. ಮೂಲಭೂತ ಸೌಕರ್ಯವನ್ನು ಒದಗಿಸಲು ಮುತುವರ್ಜಿ ವಹಿಸುತ್ತೇನೆ.” ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಇಂದು ಕೆಮ್ಮಣ್ಣು, ಕಳ್ತೂರಿನ ಗೇರುಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಡಾ. ಸುನೀತಾ, ಸಹಕಾರಿ ಸಂಘದ ಧುರೀಣ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಮಾಜಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.