ಪ್ರಸಾದ್ ರಾಜ್ ಕಾಂಚನ್ ಸಾರಥ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆ; ಹಲವು ಮಂದಿ ಕೈ ಮುಖಂಡರು ಕಾರ್ಯಕರ್ತರು ಭಾಗಿ
Sunday, May 7, 2023
ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್ ಸಾರಥ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆಯು ಕದಿಕೆ ಜಂಕ್ಷನ್ ನಿಂದ ಪ್ರಾರಂಭವಾಗಿ ತೊಟ್ಟಂ, ಪಾವಂಜಿಗುಡ್ಡೆ, ಸನ್ಯಾಸಿಮಠವಾಗಿ, ಹಂಪನಕಟ್ಟೆಯವರೆಗೆ ರವಿವಾರ ನಡೆಯಿತು.
ಈ ಸಂದರ್ಭದಲ್ಲಿ ಕೇರಳ ಸಂಸದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ ಶೆಟ್ಟಿ, ಮಾಜಿ ಜಿ.ಪಂ ಸದಸ್ಯೆ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಸರಳಾ ಕಾಂಚನ್, ಕಾಂಗ್ರೆಸ್ ನಾಯಕರಾದ ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ರಮೇಶ್ ಪೂಜಾರಿ ಮೊದಾಲಾದವರು ಉಪಸ್ಥಿತರಿದ್ದರು.