ವಿಶ್ವಕರ್ಮ ಸಮುದಾಯಕ್ಕೂ ಕಾಂಗ್ರೆಸ್ ನಲ್ಲಿ ಪ್ರಾತಿನಿಧ್ಯ ಸಿಗುತ್ತೆ: ವಿನಯ ಕುಮಾರ್ ಸೊರಕೆ ಭರವಸೆ
ಪೆರ್ಡೂರು: ಶಿಲ್ಪಕಲೆ ಭಾರತದ ಪ್ರಾಚೀನ ಕಲೆಗಳಲ್ಲಿ ಒಂದಾಗಿದೆ. ವಿಶ್ವಕರ್ಮ ಜನಾಂಗದವರು ಈ ಕಲೆಯನ್ನು ಪ್ರಾಚೀನ ವಾಗಿ ಆರಾಧಿಸಿಕೊಂಡು ಬಂದಿದ್ದಾರೆ. ಕಲಾರಾಧನೆಯ ವ್ರತ್ತಿಯನ್ನು ಬಂದಿರುವ ಈ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ತೆ ಸಿಕ್ಕಿರುವುದು ಬಹಳ ಕಡಿಮೆ ಈ ಬಾರಿ ಇತರ ಸಮುದಾಯದ ಜೊತೆಗೆ ವಿಶ್ವಕರ್ಮ ಜನಾಂಗಕ್ಕೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಪೆರ್ಡೂರು ಬುಕ್ಕಿಗುಡ್ಡೆ ಕೈರ್ ವಿಶ್ವಕರ್ಮ ಸಭಾಭವನದ ಸಮೀಪ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಬಾಂಧವರನ್ನು ಹಿಂದಿನ ಸರ್ಕಾರ ಓಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿದೆ. ರಾಜಕೀಯ ಪ್ರಾತಿನಿಧ್ಯ ಕೊಡುತ್ತೇವೆ, ಅನುದಾನವನ್ನು ಕೊಡುತ್ತೇವೆ ಅಂತಾ ಪ್ರತೀ ಚುನಾವಣೆಯಲ್ಲೂ ಹೇಳಿಕೊಂಡು ಬರುತ್ತಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಆನೆಗೊಂದು ಸಂಸ್ಥಾನ ಕ್ಕೆ 50 ಲಕ್ಚ ರೂಪಾಯಿ ಅನುದಾನವನ್ನು ಸರಕಾರದ ಮೂಲಕ ಒದಗಿಸಿದ್ದೇನೆ.. ಇನ್ನೂ ಬಹಳಷ್ಟು ಬೇಡಿಕೆಗಳನ್ನು ಇತರ ಸಮುದಾಯದ ಜೊತೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದು ಸೊರಕೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಲಾಲ್, ದಿನೇಶ್ ಪೂಜಾರಿ, ಶೋಭಾ, ರಾಮದಾಸ್, ಹರೀಶ್, ರಾಮ ಕುಲಾಲ್, ರಘುನಾಥ್ ನಾಯ್ಕ್, ಸುಂದರ, ರಾಘವೆ ಶೆಟ್ಟಿ, ಶರತ್ ಶೆಟ್ಟಿ, ಸ್ಥಳೀಯ ವಿಶ್ವಕರ್ಮ ಮುಖಂಡರಾದ ಉಪೇಂದ್ರ ಆಚಾರ್, ವೆಂಕಟರಮಣ ಆಚಾರ್, ಭಾಸ್ಕರ ಆಚಾರ್ ಉಪಸ್ಥಿತರಿದ್ದರು.