ಲೋಕಸಭಾ ಚುನಾವಣೆಯಲ್ಲಿ ಡಾ.ಕಣಚೂರು ಮೋನು ಹಾಜಿಯವರಿಗೆ ಅವಕಾಶ ಸಿಗಲಿ

ಲೋಕಸಭಾ ಚುನಾವಣೆಯಲ್ಲಿ ಡಾ.ಕಣಚೂರು ಮೋನು ಹಾಜಿಯವರಿಗೆ ಅವಕಾಶ ಸಿಗಲಿ

ಬರುವ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಡಾ.ಮೋನು ಹಾಜಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಬಹಳ ಉತ್ತಮ ಆಯ್ಕೆಯಾಗುವುದಲ್ಲದೆ ಅವರು ಗೆದ್ದು ಬರುವ ಸಾಧ್ಯತೆ ಕೂಡಾ ಇದೆಯೆನ್ನುವುದು ವಾಸ್ತವ. 

ಡಾ. ಮೋನು ಹಾಜಿಯವರು ಜೀವನದುದ್ದಕ್ಕೂ ಕಾಂಗ್ರೆಸ್ ನ ನಿಷ್ಠಾವಂತ ಅನುಯಾಯಿಯಾಗಿ ಬೆಳೆದು ಬಂದವರು. ಆಮೇಲೆ ಪಕ್ಷದ ಸ್ಪರ್ಧಿಗಳಿಗೆ ಅಪಾರ ಮತಗಳನ್ನು ಹಾಕಿಸುವಲ್ಲಿ ಕಾರಣರಾದವರು. ಅವರು ಆರ್ಥಿಕ ಮುನ್ನೆಲೆ ಸಾಧಿಸಿದ ನಂತರವಂತೂ ಕಾಂಗ್ರೆಸ್ ಗೆ ಸಂಪನ್ಮೂಲ ವ್ಯಕ್ತಿಯಾಗಿ ಕೊಡುಗೆ ನೀಡಿದವರು. 

ವ್ಯಕ್ತಿತ್ವದಲ್ಲೂ  ನಿಷ್ಕಳಂಕರಾಗಿ, ಶೈಕ್ಷಣಿಕ ರಂಗದಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಡಾ. ಮೋನು ಹಾಜಿಯವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ. ಜನ್ಮ ನಾಡಿನಲ್ಲೇ ಒಂದು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಕೊಡುವುದು ಸಾಮಾನ್ಯ ವಿಷಯವಲ್ಲ. ಅದು ಆ ವ್ಯಕ್ತಿಯ ಪಾರದರ್ಶಕತೆಗೆ ಹಿಡಿದ ಕೈಗನ್ನಡಿ.

ಡಾ. ಮೋನು ಹಾಜಿಯವರ ಜನಾದರಣೆ  ಕೇವಲ ಮುಸ್ಲಿಮ್  ಸಮಾಜಕ್ಕೆ  ಮಾತ್ರ ಸೀಮಿತವಲ್ಲ. ಪಕ್ಷ, ಜಾತಿ, ಧರ್ಮಗಳ ಎಲ್ಲೆ ಮೀರಿ ಎಲ್ಲರ ನಡುವೆ ಗೌರವಾದರ ಗಳಿಸಿಕೊಂಡಿರುವ ವ್ಯಕ್ತಿತ್ವ ಅವರದ್ದು. ಕಾರಣ, ಅವರ ಒಡನಾಟ, ಜನಸೇವೆ, ಕೊಡುಗೆಗಳು ಅದಕ್ಕೆ ತಕ್ಕುದಾಗಿಯೇ ಇದೆ. ಜಾತಿಮತ, ಪಕ್ಷಬೇಧವಿಲ್ಲದೆ ಸರ್ವ ಸಮಾನತಾ ಭಾವದ ಅವರ ನಿಸ್ವಾರ್ಥ ಸೇವೆ ಸರ್ವಾದರಣೀಯವಾಗಿದೆ. 

ಆದ್ದರಿಂದ ಘನ ಕಾಂಗ್ರೆಸ್ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಾ. ಮೋನು ಹಾಜಿಯವರಿಗೆ ಸೀಟು ಕೊಡಬೇಕೆಂಬುದು ನನ್ನ ಕಳಕಳಿಯ ವಿನಂತಿಯಾಗಿದೆ. ಡಾ. ಮೋನು ಹಾಜಿಯವರಿಗೆ ಸೀಟು ನೀಡಿದರೆ ಮುಂಬರುವ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ ಕಾಂಗ್ರೆಸ್ ಪಾಲಾಗುವುದು ಖಂಡಿತ ಎಂದು ಜನಾಭಿಪ್ರಾಯವಿದೆ. ಅವರ ವೈಯಕ್ತಿಕ ವರ್ಚಸ್ಸು ಮತ್ತು ಜಾತಿಮತಧರ್ಮ ಬೇಧ ಮೀರಿದ ಅವರ ಜನಪ್ರಿಯತೆಯು ಮತಬ್ಯಾಂಕಾಗಿ ಫಲ ನೀಡಲಿರುವುದು ಖಂಡಿತ.

- ಡಿ‌ . ಐ‌ . ಅಬೂಬಕರ್ ಕೈರಂಗಳAds on article

Advertise in articles 1

advertising articles 2

Advertise under the article