ಪಂಚಾಯತ್ ಶಿಫಾರಸು ಮಾಡಿದರೆ ಮುಂದಿನ ದಿನಗಳಲ್ಲಿ ಶಿರ್ವ ಪಟ್ಟಣ ಪಂಚಾಯತ್: ಸೊರಕೆ

ಪಂಚಾಯತ್ ಶಿಫಾರಸು ಮಾಡಿದರೆ ಮುಂದಿನ ದಿನಗಳಲ್ಲಿ ಶಿರ್ವ ಪಟ್ಟಣ ಪಂಚಾಯತ್: ಸೊರಕೆ


ಕಾಪು: ಪಂಚಾಯತ್ ಶಿಫಾರಸು ಮಾಡಿದರೆ ಮುಂದಿನ ದಿನಗಳಲ್ಲಿ ಶಿರ್ವವನ್ನು ಪಟ್ಟಣ ಪಂಚಾಯತ್ ಮಾಡೋ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಶಿರ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಪು ಕ್ಷೇತ್ರಕ್ಕೆ ಶಿರ್ವ  ಕೇಂದ್ರ ಸ್ಥಳ. ಶಿರ್ವ ಪಟ್ಟಣ ಪಂಚಾಯತ್ ಮಾಡುವಷ್ಟು ಎಲ್ಲಾ ಅರ್ಹತೆವನ್ನು,ಅವಕಾಶವನ್ನು  ಹೊಂದಿದೆ.ಪಂಚಾಯತ್ ಶಿಫಾರಸು ಮಾಡಿದ್ರೆ ಶಿರ್ವಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವವನ್ನು ಮಾಡಲು ಸಾಧ್ಯವಿದೆ ಅಂತಾ ಸೊರಕೆ ಹೇಳಿದ್ದಾರೆ.


ಪ್ರತೀ ಪಂಚಾಯತ್ ಗೆ ಮೂರು ತಿಂಗಳಿಗೊಮ್ಮೆ  ಭೇಟಿ ಕೊಡ್ತಿದ್ದೆ. ಜನಸಂಪರ್ಕ ಸಭೆ, ಪಂಚಾಯತ್ ಭೇಟಿ ಮಾಡೋದು ಇದು‌ ಶಾಸಕರ ಜವಬ್ದಾರಿ. ನಾನು ಶಾಸಕನಾಗಿದ್ದಾಗ ಮೂರು ತಿಂಗಳಿಗೊಮ್ಮ  ಪಂಚಾಯತ್ ಗೆ ಭೇಟಿ ಕೊಡೋದು.ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸ್ಥಳೀಯ ಪಂಚಾಯತ್ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡ್ತಾ ಇದ್ದೆ.ಕಳೆದ 5 ವರ್ಷಗಳಿಂದ ಅವೆಲ್ಲವೂ‌ ನಿಂತು‌ಹೋಗಿದೆ. .‌ಕಾಮಗಾರಿಗಳಲ್ಲಿ‌ಕಮಿಷನ್ ಹೊಡೆಯೋ‌ ಕೆಲಸ.. ತಾಲೂಕು ಕಚೇರಿಗಳಲ್ಲಿ ಬ್ರೋಕರ್ ಗಳೇ ತುಂಬಿ‌ಹೋಗಿ  ಜನರ ಕೆಲಸಗಳು ಆಗ್ತಾ ಇಲ್ಲ. ಎಲ್ಲದಕ್ಕೂ ಕಡಿವಾಣ ಹಾಕೋ‌‌ ಕೆಲಸವಾಗಬೇಕಿದೆ...‌ಜನರ ಕೆಲಸಕ್ಕೆ ಆದ್ಯತೆ ಸಿಗಬೇಕಾಗಿದೆ ಅಂತಾ ಸೊರಕೆ ಹೇಳಿದ್ದಾರೆ. 

ಈ ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ‌ ವರ್ಗದ ಶ್ರಮ ಬಹಳಷ್ಟು ಇದೆ.ಕಾರ್ಮಿಕರನ್ನು ತುಳಿಯೋ‌ ಕೆಲಸ ಕೂಡಾ ಆಡಳಿತರೂಡ ಸರ್ಕಾರ ಮಾಡ್ತಿದೆ ಅಂತಾ ಅವರು ಆರೋಪ ಮಾಡಿದರು. ಪ್ರಾಕೃತಿಕ ವಾಗಿ ಮಾನವ ಸಂಪನ್ಮೂಲ ವನ್ನು ಹೊಂದಿದ‌ ಊರು ಕಾಪು. ವಿಭಿನ್ನ ಸಮುದಾಯ ವನ್ನು ಹೊಂದಿದ ಊರು ಕಾಪು..‌ಕುಡಿಯುವ ನೀರಿನ‌ ಸಮಸ್ಯೆ ಮನೆ ನಿವೇಶನದ ಅರ್ಜಿ‌ಬಾಕಿ‌ ಇದೆ.

ಪಾದೂರಿನಲ್ಲಿ‌  ಕಚ್ಛಾ ತೈಲ ಘಟಕದ ಸಂತ್ರಸ್ತರಿಗೆ ದೇಶದಲ್ಲಿ‌ ಎಲ್ಲೂ ಸಿಗದ  ಪರಿಹಾರವನ್ನು ಕೊಡಿಸುವ ಕೆಲಸ  ಮಾಡಿದಿನಿ ಕೈಗಾರಿಕೆಗಳಲ್ಲಿ ಊರಿನ‌ ಜನರಿಗೆ ಉದ್ಯೋಗ ಕೆಲಸ ಕೊಡೋ ಕೆಲಸ ಹೆಚ್ಚು  ಆಗಬೇಕು..‌ಮನೆಗೊಂದು‌ ಉದ್ಯೋಗ ಕೊಡುವ  ಬಂಪರ್ ಯೋಜನೆಯನ್ನು‌ ನಾವು ಮಾಡ್ತಿವಿ. ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ  ಕಾಂಗ್ರೆಸ್ ಸರಕಾರ ಬಂದ್ರೆ ಬಡವರಿಗೆ ಜನ‌ಸಾಮಾನ್ಯರಿಗೆ ಸಹಾಯ ಆಗುತ್ತದೆ...  ಸೊರಕೆಯವರು ಪ್ರತೀ ಪಂಚಾಯತ್ ಮಟ್ಟಕ್ಕೆ ಬಂದು ಎಲ್ಲಾ ವ್ಯವಸ್ಥೆ ಗಳನ್ನು ಕಲ್ಪಿಸುವ ಕೆಲಸ‌ಮಾಡಿದ್ದಾರೆ. ..‌ಶಿರ್ವ ಗ್ರಾಮ ಕಾಂಗ್ರೆಸ್ ನ‌ ಭದ್ರಕೋಟೆ...‌ಶಿರ್ವ ಗ್ರಾಮದಲ್ಲಿ‌ ಕಾಂಗ್ರೆಸನ ಒಂದು‌ ಓಟು‌ ಈ‌ ಬಾರಿ‌ ಮಿಸ್ ಆಗೋದಿಲ್ಲ ಅನ್ನೊ‌ ನಂಬಿಕೆ ಇದೆ ಅಂತಾ ಐವನ್ ಡಿಸೋಜ ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೊಜ, ರತನ್ ಶೆಟ್ಟಿ, ‌ನವೀನ್ ಚಂದ್ರ ಶೆಟ್ಟಿ, ದಿನೇಶ್ ಕೋಟ್ಯಾನ್ , ಜಿತೇಂದ್ರ ಪುಟಾರ್ಡೊ, ಪ್ರಕಾಶ್,  ಗೀತಾ ವಾಗ್ಲೆ, ಪ್ರಭಾ ಶೆಟ್ಟಿ,ಪ್ರಶಾಂತ್ ಜತ್ತನ್,ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article