ಲೇ ಔಟ್ ಖಾತಾಗೆ ಮಾಸ್ಟರ್ ಪ್ಲ್ಯಾನ್: ವಿನಯ್‌ಕುಮಾರ್ ಸೊರಕೆ
ಉಡುಪಿ: ಕಾಪು ಕ್ಷೇತ್ರದಲ್ಲಿ ಪುರಸಭೆ ಆದ ನಂತರ ಸನ್ ಶೈನ್ ಬಡಾವಣೆ ಖಾತಾ ಸಮಸ್ಯೆಗೆ ಪ್ರಾಧಿಕಾರದ ಮೂಲಕ ಖಾತಾ ಪಡೆಯುವ ಸಮಸ್ಯೆಗೆ ಶೀಘ್ರದಲ್ಲೇ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್‌ಕುಮಾರ್ ಸೊರಕರ ಹೇಳಿದ್ದಾರೆ.
ಮಲ್ಲಾರು ಸನ್ ಸೈನ್ ಬಡಾವಣೆ ಗ್ರಾಮಸ್ಥರ ಸಮಸ್ಯೆ ಗೆ ಸ್ಪಂದಿಸಿ ಮಾತನಾಡಿದ ಅವರು ಕಾಪುವಿನಲ್ಲಿ ಗ್ರಾಮ ಪಂಚಾಯತ್ ಇರುವಾಗ ಲೇ ಔಟ್ ನಲ್ಲಿ ಜಾಗ ಖರೀದಿಸಿದ ಜನರು ಕಾಪು ಪುರಸಭೆಯಾದ ನಂತರ ಪ್ರಾಧಿಕಾರದ ಮೂಲಕ ಖಾತಾ ಮಾಡಲು ಬಹಳಷ್ಟು ಹೆಣಗಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಳೆದ ಬಾರಿ ಎಲ್ಲವನ್ನು ಸರಿಪಡಿಸುವ ನಿಟ್ಟಿನಲ್ಲಿ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿ ನನ್ನನ್ನು ಚುನಾವಣೆಯಲ್ಲಿ ಸೋಲುವ ಹಾಗೇ ಮಾಡಿತ್ತು.. ಸೋತ ಮೇಲೂ ಈ ಬಗ್ಗೆ ಪ್ರಾಧಿಕಾರದ ಖಾತಾ ಬೈ ಲಾ ನಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಮಾಸ್ಟರ್ ಪ್ಲಾನ್ ರೂಪಿಸಿ ಬದಲಾವಣೆ ತರಲು ಪ್ರಾಧಿಕಾರಕ್ಕೆ ತಿಳಿಸಿದ್ದೆ. ನನಗೆ ಅಧಿಕಾರವಿಲ್ಲದ ಕಾರಣ ನನ್ನ ಮಾತನ್ನು ಅಧಿಕಾರಿಗಳು ಪುರಸ್ಕರಿಸಿಲ್ಲ. ಈ ಬಾರಿ ಶಾಸಕನಾಗಿ ನನ್ನ ಆಯ್ಕೆ ಮಾಡಿದರೆ ಒಂದು ತಿಂಗಳೊಳಗೆ ಈ ಸಮಸ್ಯೆಗೆ ಪರಿಹಾರ ರೂಪಿಸಲಾಗುವುದು ಅಂತಾ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಶಾಂತಲತಾ, ರಮೀಝ್ , ಶರ್ಪುದ್ದೀನ್ ಅಮೀರ್, ಸಾದೀಕ್, ದೀಪ್ತಿ, ನಯೀಮ್, ಬಾಶು ಸಾಬ್, ಶುಭ, , ಅನಿಲ್ ಶೆಟ್ಟಿ, ಬಡಾವಣೆಯ ಪ್ರಮುಖರಾದ ರವಿ ಆಚಾರ್ಯ ಉಪಸ್ಥಿತರಿದ್ದರು.