ಕಾಂತವಾರ, ಮಿಯ್ಯಾರು ಗ್ರಾಮದಲ್ಲಿ ಮನೆ ಮನೆ ಪ್ರಚಾರ ನಡೆಸಿ ಮತಯಾಚಿಸಿದ ಶಾಸಕ ಸುನಿಲ್ ಕುಮಾರ್
Thursday, May 4, 2023
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂತವಾರ ಮತ್ತು ಮಿಯ್ಯಾರು ಗ್ರಾಮದಲ್ಲಿ ಬುಧವಾರ ಶಾಸಕ ಸುನಿಲ್ ಕುಮಾರ್ ಮನೆ ಮನೆ ಪ್ರಚಾರ ನಡೆಸಿದರು.
ಕಾರ್ಯಕರ್ತರೊಂದಿಗೆ ಹಲವು ಮನೆಗಳಿಗೆ ಭೇಟಿ ನೀಡಿದ ಅವರು, ಮತದಾರರನ್ನು ಭೇಟಿ ಮಾಡಿ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನನಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸುವಂತೆ ಕೋರಿದರು.