ಸಿಎಂ, ಡಿಸಿಎಂಗೆ ಶುಭಕೋರಿ ಹಾಕಿದ್ದ ಫ್ಲೆಕ್ಸನ್ನು ಹರಿದು ಹಾಕಿದ ಕಿಡಿಗೇಡಿಗಳು; ದೂರು ನೀಡಿದ ಉಡುಪಿ ಬ್ಲಾಕ್ ಕಾಂಗ್ರೆಸ್
Saturday, May 27, 2023
ಉಡುಪಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ರವರಿಗೆ ಅಭಿಮಾನಿಗಳು ಶುಭಾಶಯ ಕೋರಿ ಮಲ್ಪೆ ಪಡುಕರೆ ಸೇತುವೆ ಬಳಿಯಲ್ಲಿ ಹಾಕಿದ್ದ ಫ್ಲೆಕ್ಸನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿ ಕ್ರೌರ್ಯ ಮೆರೆದ ಘಟನೆಗೆ ಸಂಬಂಧಿಸಿದಂತೆ ದಿನಾಂಕ 24/05/2023 ರಂದು ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕ ಕೃಷ್ಣ ಮೂರ್ತಿ ಆಚಾರ್ಯ, ಉಡುಪಿ Sಅ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಉಡುಪಿ ಬ್ಲಾಕ್ ಮೀನುಗಾರ ಘಟಕದ ಅಧ್ಯಕ್ಷ ಚರಣ್ ಬಂಗೇರ, ಶರತ್ ಶೆಟ್ಟಿ, ಪ್ರವೀಣ್ ಕೊಡವೂರು, ಗಣೇಶ್ ಕಲ್ಮಾಡಿ, ಮಧುಕರ್, ಸಜ್ಜನ್ ಶೆಟ್ಟಿ, ಸುದರ್ಶನ್ ಸುವರ್ಣ, ಆನಂದ್ ಕಾಂಚನ್, ಜನಾರ್ಧನ ಬಂಗೇರ, ರಮೇಶ್ ಸುವರ್ಣ, ತರುಣ್ ತಿಂಗಳಾಯ ಉಪಸ್ಥಿತರಿದ್ದರು.