ನಾಳೆಯಿಂದಲೇ ಆರಂಭವಾಗಲಿದೆ ಅನ್ನಭಾಗ್ಯದಡಿ 5ಕೆಜಿ ಅಕ್ಕಿ ಜೊತೆ ಹಣ! ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಬೇಕಿದ್ದರೆ ಏನು ಕಡ್ಡಾಯವಾಗಿರಬೇಕು ಗೊತ್ತೇ...?

ನಾಳೆಯಿಂದಲೇ ಆರಂಭವಾಗಲಿದೆ ಅನ್ನಭಾಗ್ಯದಡಿ 5ಕೆಜಿ ಅಕ್ಕಿ ಜೊತೆ ಹಣ! ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಬೇಕಿದ್ದರೆ ಏನು ಕಡ್ಡಾಯವಾಗಿರಬೇಕು ಗೊತ್ತೇ...?

ಬೆಂಗಳೂರು: ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಆದರೆ ಅಗತ್ಯವಿರುವಷ್ಟು ಅಕ್ಕಿ ಸಿಕ್ಕಿಲ್ಲ. ಅದಕ್ಕಾಗಿ ರಾಜ್ಯ ನೀಡುವ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ನಾಳೆಯೇ ಅನ್ನಭಾಗ್ಯ ಯೋಜನೆಯೂ ಕೂಡ ಜಾರಿಯಾಗಬೇಕಿದೆ. 

ಬಿಪಿಎಲ್​ ಕಾರ್ಡ್​​ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ತಲಾ 170  ಹಣ ಪಾವತಿಸಬೇಕಾಗಿದೆ. ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂಪಾಯಿ ಸಿಗಲಿದೆ. ಒಂದು ವೇಳೆ ಕುಟುಂಬದಲ್ಲಿ ಐವರು ಇದ್ದರೇ ಮಾಸಿಕ 850 ರೂಪಾಯಿ ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ ಈ ಹಣವನ್ನ ಯಾವಾಗ ಅಕೌಂಟ್‌ಗೆ ಹಾಕುತ್ತಾರೆ? ಒಂದೇ ಬಾರಿಗೆ ಹಾಕುತ್ತಾರಾ? ಇಲ್ಲ ಹಂತ ಹಂತವಾಗಿ ನೀಡುಲಾಗುತ್ತಾ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ.

ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ (Annabhagya Scheme) 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಆದರೀಗ ಈ ಹಣಕ್ಕಾಗಿ ಅಧಾರ್ ಲಿಂಕ್ (Aadhaar Card Link) ಕಡ್ಡಾಯವಾಗಿರುತ್ತದೆ.

ಅಂದಹಾಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ನೀವು ಬಿಪಿಎಲ್ ಕಾರ್ಡ್(BPL Card) ಹೊಂದಿರಬೇಕು. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ (Bank Account) ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಪಡಿತರ ಚೀಟಿಯಲ್ಲಿ (Ration Card) ಮನೆ ಮುಖ್ಯಸ್ಥರು ಯಾರು ಅನ್ನೋದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು.

ಅಲ್ಲದೆ ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್(Adhar card) ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಈ ಧನಭಾಗ್ಯಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆದರೆ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆ ವಿವರ ಮಾತ್ರ ಕಡ್ಡಾಯವಾಗಿರುತ್ತದೆ.

ಅಲ್ಲದೆ ಆಹಾರ ಇಲಾಖೆ ಮಾಹಿತಿ ಪ್ರಕಾರ, ಸದ್ಯ 1.28 ಕೋಟಿ ಫಲಾನುಭವಿಗಳು ಇದ್ದು ಅದರಲ್ಲಿ 6 ಲಕ್ಷ ಖಾತೆದಾರರಲ್ಲಿ ಆಕೌಂಟ್ ಸಮಸ್ಯೆ ಹಾಗೂ ಅಧಾರ್ ಲಿಂಕ್ ಆಗದೇ ಇರುವ ಸಮಸ್ಯೆ ಇದೆ. ಹೀಗಾಗಿ ಜುಲೈ 1 ನಲ್ಲಿ ಇವರಿಗೆ ದುಡ್ಡು ಕೊಡಲು ಸಮಸ್ಯೆಯಾಗಬಹುದು. ಅಕೌಂಟ್, ಆಧಾರ್ ಲಿಂಕ್ ಮಾಡಿಸಿದ ಬಳಿಕವಷ್ಟೇ ದುಡ್ಡು ನೇರವಾಗಿ ಡಿಬಿಟಿ ಮೂಲಕ ಜಮೆಯಾಗುತ್ತೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬಿಪಿಎಲ್ ಕಾರ್ಡ್ ಇರುವವರು ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಈ ಕೂಡಲೇ ಬ್ಯಾಂಕ್ ಗೆ ತೆರಳಿ ಲಿಂಕ್ ಮಾಡಿಸಿ.

Ads on article

Advertise in articles 1

advertising articles 2

Advertise under the article