ಕಾರ್ನಾಡ್ ಮುಲ್ಕಿಯ ಮಸ್ಜಿದ್ ಅತ್ತೌಹೀದ್'ನಲ್ಲಿ ಸಂಭ್ರಮದ ಈದ್-ಉಲ್-ಅಧಾ ಆಚರಣೆ
Thursday, June 29, 2023
ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್, ಮಂಗಳೂರು ಅಧೀನದ ಮಸ್ಜಿದ್ ಅತ್ತೌಹೀದ್ ಕಾರ್ನಾಡ್ ಮುಲ್ಕಿಯಲ್ಲಿ ಸಂಭ್ರಮದ ಈದ್-ಉಲ್-ಅಧಾ ಆಚರಣೆ ನಡೆಯಿತು. ಮಸ್ಜಿದ್ ಆಡಳಿತ ಸಮಿತಿಯ ಸದಸ್ಯರುಗಳು, ಜಮಾಹತ್ ಭಾಂಧವರು, ಮಕ್ಕಳು ಹಾಗೂ ಮಹಿಳೆಯರು ಸಂಭ್ರಮದ ಈದ್ ನಮಾಜಿನಲ್ಲಿ ಭಾಗವಹಿಸಿದರು.
ತ್ಯಾಗ ಬಲಿದಾನದ ಹಬ್ಬವಾದ ಈದ್-ಉಲ್-ಅಧಾ ನಮಾಜಿನ ನೇತೃತ್ವವನ್ನು ಮೌಲವಿ ಎಸ್.ಎಂ. ಅಬು ಬಿಲಾಲ್ ವಹಿಸಿ ಖುತ್ಬಾವನ್ನು ನೆರೆವೇರಿಸಿದರು.
ಈದ್ ಖುತ್ಬಾದಲ್ಲಿ ಇಮಾಮರು ಶಾಂತಿ ಸಂದೇಶದೊಡನೆ ಖಲೀಲುಲ್ಲಾಹಿ ಇಬ್ರಾಹಿಂ ನಬಿ ಅಲೈವ ಸಲ್ಲಮರವರ ತ್ಯಾಗ ಬಲಿದಾನ ಹಾಗೂ ಏಕದೇವ ವಿಶ್ವಾಸದ ಬಗ್ಗೆ ಸಂದೇಶವನ್ನು ನೀಡಿದರು. ಈದ್ ಖುತ್ಬಾ ನಂತರ ವಿಶ್ವಾಸಿಗಳು ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.