ಹೆಮ್ಮೆಯ ದುಬೈ ಕನ್ನಡ ಸಂಘದಿಂದ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ-ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೆಮ್ಮೆಯ ದುಬೈ ಕನ್ನಡ ಸಂಘದಿಂದ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ-ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅಬುಧಾಬಿ: ದುಬೈಯಲ್ಲಿರುವ ಹೆಮ್ಮೆಯ ಕನ್ನಡ ಸಂಘದ ವತಿಯಿಂದ  5ನೇ ಆವೃತ್ತಿಯ ಅನಿವಾಸಿ ಯುಎಇ ಕನ್ನಡ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ ಮತ್ತು ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅದ್ದೂರಿಯಾಗಿ ಮೇ 21ರಂದು ಜೆ ಎಸ್ ಎಸ್ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು, ತಾಯಿನಾಡಿನಿಂದ ಆಗಮಿಸಿದ ಕಲಾವಿದರು ನೆರೆದ ಪ್ರೇಕ್ಷರಿಗೆ ಸಂಗೀತ ಸಂಜೆಯ ರಸದೌತಣವನ್ನು ಉಣಬಡಿಸಿದರು. 

















ಮದ್ಯಾಹ್ನ  2ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ  ನೃತ್ಯ, ಹಾಡುಗಾರಿಕೆ, ಸಂಗೀತ ಉಪಕರಣ ವಾಚನ ಮತ್ತು ಡ್ರಾಯಿಂಗ್ ಸ್ಪರ್ಧೆಗಳು ಒಂದರ ನಂತರ ಒಂದರಂತೆ ವಿವಿಧ ವಯೋಮಿತಿಗಳ ಕನ್ನಡ ಮಕ್ಕಳಿಗೆ ನಡೆಯಿತು, ವಿವಿಧ ವಿಭಾಗಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಮತ್ತು ಸಂಘಟಕರು ಸೇರಿ ಬಹುಮಾನ ಮತ್ತು ಸರ್ಟಿಫಿಕೇಟ್ ವಿತರಿಸಿದರು, ವಿವಿಧ ವಯೋಮಿತಿಯಳ್ಳ  ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಫ್ಯಾಷನ್ ನಡಿಗೆ ಸಹ ನಡೆದಿದ್ದು ನೋಡುಗರಿಗೆ ಸಂತಸ ನೀಡಿತು, ಕಾರ್ಯಕ್ರಮ ರಾತ್ರಿ 10ಘಂಟೆ ವರೆಗೂ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಧು ದಾವಣಗೆರೆ ಅವರು ನೆರವೇರಿಸಿದ್ದರು.  
















ಕಾರ್ಯಕ್ರಮದ ಮತ್ತೊಂದು  ಮುಖ್ಯ ಭಾಗವಾದ, ಸಂಯುಕ್ತ ಅರಬ್ ಸಂಸ್ಥಾನದಲ್ಲಿ ವ್ಯಾಸಾಂಗ ಮಾಡಿ 2022-2023 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. 

ಬೆಂಗಳೂರಿನಿಂದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ನಟಿ ಸಂಜನಾ ಆನಂದ್, ಗಾಯಕ ಕಂಬದ ರಂಗಯ್ಯ, ನಿರೂಪಕಿ ಶಮೀರಾ ಬೆಳ್ವಾಯಿ, ಬಾಲ ನಟಿ ಪುಟಾಣಿ ವಂಶಿಕ, ಕಿರುತೆರೆ ನಟಿ ಯಶಸ್ವಿನಿ ಮಾಸ್ಟರ್ ಆನಂದ್ ಮತ್ತು ರಾಕ್ ಬ್ರೇಕರ್ಸ್ ಡಾನ್ಸ್ ಅಕಾಡೆಮಿ ತಂಡದ ಮಾಸ್ಟರ್ ಶಶಾಂಕ್, ಕಿರಣ್,  ಕೀರ್ತನ,  ಹಂಸ,  ದಿಯಾ  ಮುಂತಾದ ಕಲಾವಿದರು ಆಗಮಿಸಿ ಅನಿವಾಸಿ ದುಬೈ ಕನ್ನಡಿಗರನ್ನು ರಂಜಿಸಿದರು. 

ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು ಅತಿಥಿಗಳಾಗಿ ಖುಷಿ ಡೆವೆಲಪೋರ್ಸ್ , ಅಬುಧಾಬಿ  ಎಂಬಸ್ಸಿ ಅಧಿಕಾರಿ ಗಾಯತ್ರಿ ಬೆಂಗಳೂರು, ಕೆ ಎನ್ ಆರ್ ಐ ಫೋರಮ್ ಅಧ್ಯಕ್ಷರಾದ ಪ್ರವೀಣ್ ಶಟ್ಟಿ ಮುಂತಾದವರು ತಾಯಿನಾಡಿನಿಂದ ಆಗಮಿಸಿದ ಅತಿಥಿ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡು ಸಭಾ ಕಾರ್ಯಕ್ರಮ ನೆರವೇರಿಸಿದರು, ಇದೇ  ವೇಳೆಯಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ನವೀಕೃತಗೊಂಡ ಲೋಗೋ, ವೆಬ್ಸೈಟ್ ಹಾಗೂ ಸಂಘದ ಥೀಮ್ ಸಾಂಗ್ ಬಿಡುಗಡೆಗೊಂಡಿತು, ಹಾಗೆ ಸಂಘವು ಕಳೆದ ವರ್ಷಗಳಿಂದ ಅರಭ್ ಮರಳುಭೂಮಿ ಮತ್ತು ತಾಯಿನಾಡಲ್ಲಿ ನಡೆಸುವ ಸಾಮಾಜಿಕ ಕಾರ್ಯಗಳ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. 

ಜ್ಯೋತಿ ಬೆಳಗುವ ಮೂಲಕ ದೇವರ ನಾಮದ ಭರತ ನಾಟ್ಯದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಭಾರತ ರಾಷ್ಟ್ರ ಗೀತೆ, ಯುಎಇ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡಗೀತೆ ಮೊಳಗಿಸಲಾಯಿತು. ಭಾರತ ರಾಷ್ಟ್ರಗೀತೆಯನ್ನು ಯು ಏ ಈ ಕನ್ನಡ ಮಕ್ಕಳು ವಿವಿಧ ವಾದ್ಯಗಳೊಂದಿಗೆ ನುಡಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ತಾಯಿನಾಡಿನಿಂದ ಆಗಮಿಸಿದ ಶಮೀರಾ ಬೆಳ್ವಾಯಿ ಅವರು ಬಹಳ ಸೊಗಸಾಗಿ ನೆರವೇರಿಸಿದರು. ಕಾರ್ಯಕ್ರಮಕ್ಕೆ ಸ್ವಾಗತವನ್ನು ಸಂಘದ ಪಲ್ಲವಿ ದಾವಣಗೆರೆ ಅವರು ನೆರವೇರಿಸಿದರೆ ಸಭಾ ಕಾರ್ಯಕ್ರಮದ ವಿವರಣೆಯನ್ನು ಸಂಘದ ಮಾಜಿ ಅಧ್ಯಕ್ಷರಾದ ಮಮತಾ ರಾಘವೇಂದ್ರ  ಮೈಸೂರು ಅವರು ನೆರವೇರಿಸಿದರು, ವರದರಾಜ್ ಕೋಲಾರ ಅವರು ಪ್ರಾಯೋಜಕರ ಬಗ್ಗೆ ವಿವರಣೆ ನೀಡಿದರು, ಶಂಕರ್ ಬೆಳ್ಗವಿ ಅವರು ಆಗಮಿಸಿದ ಸರ್ವ ಅತಿಥಿಗಳಿಗೆ, ಸ್ಪರ್ಧಾಳು ಗಳಿಗೆ ಮತ್ತು ಪ್ರೇಕ್ಷರಿಗೆ ವಂದನಾರ್ಪಣೆ ಅರ್ಪಿಸಿದರು . 

ಕಾರ್ಯಕ್ರಮದ ಆಯೋಜಕ ಸಮಿತಿಯಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ, ಉಪಾಧ್ಯಕ್ಷರಾದ ಹಾದಿಯ ಮಂಡ್ಯ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಮಾಜಿ ಅಧ್ಯಕ್ಷರುಗಳಾದ ಸುದೀಪ್ ದಾವಣಗೆರೆ, ಮಮತಾ ರಾಘವೇಂದ್ರ ಮೈಸೂರು ಮತ್ತು ಸಮಿತಿ ಸದಸ್ಯರುಗಳಾದ ಡಾ.ಸವಿತಾ ಮೈಸೂರು, ಅನಿತಾ ಬೆಂಗಳೂರು,  ವರದರಾಜ್ ಕೋಲಾರ, ಶಂಕರ್ ಬೆಳಗಾವಿ, ಮೊಹೀನುದ್ದೀನ್ ಹುಬ್ಬಳ್ಳಿ, ಹಾಗೂ ಉಪಸಮಿತಿ ಸದಸ್ಯರಾದ ನಜೀರ ಮಂಡ್ಯ, ಶ್ರೀನಿವಾಸ್ ಅರಸ್ ಬೆಂಗಳೂರು ಮತ್ತು ನಿಜಾರ್ ಕಾಸರಗೋಡು ಕನ್ನಡಿಗ ಮೊದಲಾದವರು ಇದ್ದರು.

Ads on article

Advertise in articles 1

advertising articles 2

Advertise under the article