ಗೃಹಜ್ಯೋತಿ ಯೋಜನೆ ಬಗ್ಗೆ ಗೊಂದಲ ಮೂಡಿಸುತ್ತಿರುವುದು ಬಿಜೆಪಿಯವರು: ಪರಮೇಶ್ವರ್ ಆರೋಪ
Wednesday, June 7, 2023
ಉಡುಪಿ: ಗೃಹಜ್ಯೋತಿ ಯೋಜನೆಯಲ್ಲಿ ಬಿಪಿಎಲ್, ಎಪಿಎಲ್ ವರ್ಗೀಕರಣ ಮಾಡಿಲ್ಲ. ಸರ್ಕಾರ ಎಲ್ಲವನ್ನು ಸ್ಪಷ್ಟವಾಗಿ ಹೇಳಿದೆ. ಗೊಂದಲ ಉಂಟು ಮಾಡುತ್ತಿರುವುದು ಬಿಜೆಪಿಯವರು ಎಂದು ಗೃಹ ಸಚಿವ ಜಿ ಪರಮೇಶ್ವರ್ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಇಷ್ಟೇ ಹಣ ಖರ್ಚಾಗುತ್ತೆ ಎಂಬುದನ್ನು ಗಮನಿಸಿ ಸ್ಪಷ್ಟ ತೀರ್ಮಾನ ಕೈಗೊಂಡಿದ್ದೇವೆ. ಮುಖ್ಯಮಂತ್ರಿಗಳು ಎಲ್ಲ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. 12 ತಿಂಗಳ ಸರಾಸರಿ ತೆಗೆದುಕೊಳ್ಳುತ್ತೇವೆ, ಶೇಕಡ 10ರಷ್ಟು ಸೇರ್ಪಡೆ ಮಾಡುತ್ತವೆ. ಶೇಕಡ 10 ಬೆನಿಫಿಟ್ ಆಫ್ ಡೌಟ್ ನೀಡಿದ್ದೇವೆ. ಬಾಡಿಗೆದಾರರಿಗೂ ನಾವು ಕೊಡಬೇಕು ಅಲ್ವಾ. ಮಾಲಕರ ಹೆಸರಲ್ಲಿ ಅವರಿಗೆ ಲಾಭ ಆಗುತ್ತೆ. ಆದರೆ ಆ ಲಾಭ ಬಾಡಿಗೆದಾರರಿಗೆ ವರ್ಗಾವಣೆ ಆಗಲೇಬೇಕು. ಬೆನಿಫಿಟ್ ಆಫ್ ಡೌಟ್ ನ ಲಾಭ ಬಾಡಿಗೆದಾರರಿಗೆ ಸಿಗಬೇಕು. ಈ ಸಮಸ್ಯೆಯನ್ನು ನಾವು ಸಾರ್ಟ್ ಔಟ್ ಮಾಡುತ್ತೇವೆ ಎಂದರು.