ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಗೆ 'ವಿಶ್ವ ಮಾನ್ಯ ಪ್ರಶಸ್ತಿ 2024' ಪ್ರದಾನ

ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಗೆ 'ವಿಶ್ವ ಮಾನ್ಯ ಪ್ರಶಸ್ತಿ 2024' ಪ್ರದಾನ

ದುಬೈ : 2022ನೇ  ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ  ರೈ ಇವರ ಸಮಾಜಮುಖಿ ಕೆಲಸವನ್ನು  ಗುರುತಿಸಿ ಫೆ.18ರಂದು  ದುಬೈ ನಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿರುವ  17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ "ವಿಶ್ವ ಮಾನ್ಯ ಪ್ರಶಸ್ತಿ 2024 "ನೀಡಿ ಗೌರವಿಸಲಾಯಿತು.


ಹೃದಯವಾಹಿಣಿ ಕರ್ನಾಟಕ ಮಂಗಳೂರು ಮತ್ತು ಸೆಂಟ್ ಸಾಂಸ್ಕೃತಿಕ ಸಂಸ್ಥೆ ಯುಎಇ ಜಂಟಿ ಆಶ್ರಯದಲ್ಲಿ ನಡೆದ 17 ನೇ ವಿಶ್ವಕನ್ನಡ ಸಂಸ್ಕೃತಿ ಸಮೇಳನದ ಎರಡನೇ ದಿನದ ಕಾರ್ಯಕ್ರಮದ ದುಬೈಯ ಫಾರ್ಚೂನ್ ಪ್ಲಾಝ ಹೋಟೆಲ್ ನಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಇದರ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಮಾಜ ಸೇವಕರಾದ ಮಿತ್ರಂಪಾಡಿ ಜಯರಾಮ ರೈಯವರಿಗೆ "ವಿಶ್ವಮಾನ್ಯ 2024" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಅಂಬ್ಯಾಸಿಡರಾ್ ಡಾ.ಡೆವಿಡ್ ಪ್ರ್ಯಾಂಕ್ ಫೆರ್ನಾಂಡೀಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಈಡನ್ ಗ್ಲೋಬಲ್ ಸ್ಕೂಲ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು,ವೀರಶೈವ ಲಿಂಗಾಯತ ಸಮಾಜ ಯುಎಇಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ,ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾದ ಕೆ.ಪಿ. ಮಂಜುನಾಥ ಸಾಗರ್,ಸೆಂಟ್ ನ ಶೋಧನ್ ಪ್ರಸಾದ್ ಉಪಸ್ಥಿತರಿದ್ದರು.

ಮಿತ್ರಂಪಾಡಿ ಜಯರಾಮ್ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ದಿವಂಗತ ಮಿತ್ರಂಪಾಡಿ ಚನ್ನಪ್ಪ ರೈ ಹಾಗೂ ದಿಂಬ್ರಿ ಗುತ್ತು ಸರಸ್ವತಿ ರೈ ಅವರ ಸುಪುತ್ರ. ಪ್ರಸ್ತುತ ಬಿನ್ ಫರ್ದನ್ ಸಂಸ್ಥೆಯ ಸಿ. ಎಫ್. ಓ  ಆಗಿ ಯಶಸ್ವಿ ಉದ್ಯಮಿಯಾಗಿದ್ದಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೈವ,ದೇವಸ್ಥಾನಗಳ ಜೀರ್ಣೋದ್ಧಾರ ದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ  ಮಹತ್ತರ ಕಾರ್ಯವನ್ನು ಮಾಡುವ ಜೊತೆಗೆ ನೂರಕ್ಕೂ ಅಧಿಕ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ.ಕೊರೊನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ  ಜಾತ್ರಾ ಗದ್ದೆಯಲ್ಲಿ ಸಿಲುಕಿರುವ ಜಾಯಿಂಟ್ ವಿಲ್  ಕುಟುಂಬಕ್ಕೆ ಎರಡು ತಿಂಳು ಆಶ್ರಯದಾತರಾಗಿದ್ದ ವಿಚಾರವನ್ನು  ನಾವು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ನಡೆಸಲ್ಪಡುವ  ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ  ಎಂಬ ಘೋಷವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ಪ್ರತಿ ತಿಂಗಳು ನಡೆಯುವ  ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮಹಾ ಪೋಷಕರಾಗಿರುತ್ತಾರೆ. ಈ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ, ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಅಭಿಯಾನ,ಕವಿಗೋಷ್ಠಿ ಕಥಾ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು   ಸುಮಾರು 5000 ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಹಾಗೂ 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ಇದನ್ನ ನೋಡಿ ಆನಂದಿಸಿದ ಗೌರವ ಇವರಿಗೆ ಸಲ್ಲುತ್ತದೆ.

ಈ ರೀತಿಯ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ಬಹುಶಃ  ಭಾರತದಲ್ಲಿಯೇ ಪ್ರಥಮ ಎನ್ನಬಹುದು. ಕಳೆದ ಇಪ್ಪತೈದು ವರ್ಷಗಳಿಂದ ಅರಬ್ ರಾಷ್ಟ್ರದಲ್ಲೂ ಕನ್ನಡ  ಸೇವೆ ಹಾಗೂ ಕನ್ನಡಿಗರ ಸೇವೆ ಮಾಡುವ ಇವರು  ಕನ್ನಡ ಬಾಷೆ ಹಾಗೂ  ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ತನು  ಮನ ಧನ ಗಳಿಂದ ಸಹಕಾರ ನೀಡುತ್ತಾ ಬಂದಿದ್ದಾರೆ.ಡಾ ಹರ್ಷ ಕುಮಾರ್ ರೈ ಅವರ ನಿರ್ದೇಶನದ,ಪುತ್ತೂರು ಉಮೇಶ್ ನಾಯಕ ಅವರ ಸಾಹಿತ್ಯದ  'ಅಷ್ಟ ಕ್ಷೇತ್ರ ಗಾನ ವೈಭವ' ಎಂಬ ಕನ್ನಡದ ಭಕ್ತಿ ಗೀತೆಯನ್ನು ಎಂಟು ರಾಷ್ಟ್ರಗಳಲ್ಲಿ  ಬಿಡುಗಡೆಗೊಳಿಸಿದ್ದು,  ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡಿನಲ್ಲೂ ಕೂಡ ವಿಶ್ವ  ದಾಖಲೆಯಾಗಿರುತ್ತದೆ. 

ಕಳೆದ 25ವರ್ಷಗಳಿಂದ ಇವರ ಧಾರ್ಮಿಕ,  ಶೈಕ್ಷಣಿಕ, ಸಮಾಜಸೇವೆ ಹಾಗೂ ಕನ್ನಡಪರ ಸೇವೆಯನ್ನು ಗುರುತಿಸಿ 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. '2023 ರ 'ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ' ,ಇಂಟರ್ನ್ಯಾಷನಲ್ ಐಕಾನ್ ಪ್ರಶಸ್ತಿ' ಟೋಸ್ಟ್  ಮಾಸ್ಟರ್ ಅಂತರಾಷ್ಟ್ರೀಯ  ಪ್ರಶಸ್ತಿಯಾದ DTM ಮತ್ತು "ಟ್ರಿಪಲ್ ಕ್ರೌನ್" ಪ್ರಶಸ್ತಿಗೂ ಭಾಜನರಾಗಿದ್ದಾರೆ ಇತ್ಯಾದಿ ಸಂಘ-ಸಂಸ್ಥೆಗಳಿಂದಲೂ  ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಯೇರಿದೆ.  

ದೂರದ ಗಲ್ಫ್ ರಾಷ್ಟ್ರದಲ್ಲಿ ಇದ್ದರೂ ಸದಾ ಭಾರತ ದೇಶ, ಕನ್ನಡ ನಾಡು,ನುಡಿ, ನೆಲ, ಜಲದ ಶ್ರೇಯೋಭಿವೃದ್ಧಿಗಾಗಿ   ಸದಾ ತನ್ನನ್ನು ತಾನು ಅರ್ಪಿಸಿಕೊಂಡು  ಗಲ್ಫ್ ರಾಷ್ಟ್ರದಲ್ಲೂ  ಸಮಾಜ ಸೇವೆಯನ್ನು ಮಾಡುತ್ತಾ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸದಾ ಕನ್ನಡಪರ ವಿಚಾರವನ್ನು ಚಿಂತಿಸುವ ಅಬುದಾಬಿಯಲ್ಲಿರುವ  ಮಿತ್ರಂಪಾಡಿ ಜಯರಾಮ ರೈ ಅವರ ದೇಶ ಸೇವೆ ಹಾಗೂ ಸಮಾಜ ಸೇವೆ ನಿಜವಾಗಿಯೂ ಅಭಿನಂದನೀಯ ಹಾಗೂ ಶ್ರೇಷ್ಠವೆನಿಸುತ್ತದೆ. ಅಂತರಾಷ್ಟ್ರೀಯ ಜಾನಪದ ಗಾಯಕರಾದ ಗೋ.ನಾ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article