ನಾಪತ್ತೆಯಾಗಿದ್ದ ಸುರತ್ಕಲ್ ನ 4 ಮಂದಿ ವಿದ್ಯಾರ್ಥಿಗಳ ಶವ ಹಳೆಯಂಗಡಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಸುರತ್ಕಲ್ ನ 4 ಮಂದಿ ವಿದ್ಯಾರ್ಥಿಗಳ ಶವ ಹಳೆಯಂಗಡಿಯಲ್ಲಿ ಪತ್ತೆ

 

ಸುರತ್ಕಲ್: ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್ ನ 4 ಮಂದಿ  ವಿದ್ಯಾರ್ಥಿಗಳ ಶವಗಳು ಹಳೆಯಂಗಡಿಯ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿವೆ.

ಸುರತ್ಕಲ್ ಅಗರಮೇಲು ನಿವಾಸಿ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ರಾಘವೇಂದ್ರ (15), ಗುಡ್ಡಕೊಪ್ಪ ನಿವಾಸಿ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್ (15) ಮೃತಪಟ್ಟವರು. ಇವರ ಶವ ಹಳೆಯಂಗಡಿಯ ಕೊಪ್ಪಳ ಅಣೆಕಟ್ಟ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿವೆ. 

ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ವಿದ್ಯಾರ್ಥಿಗಳಾಗಿದ್ದ ಇವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳವಾರ ನಡೆದ ಇಂಗ್ಲೀಷ್ ಪ್ರಿಪೆಟರಿ ಪರೀಕ್ಷೆ ಬರೆದು ಮನೆಗೆ ಬಾರದೆ ಕಾಣೆಯಾಗಿದ್ದರು. ಒಟ್ಟು 9 ಮಂದಿ ವಿದ್ಯಾರ್ಥಿಗಳು ಈಜಲು ತೆರಳಿದ್ದು, ಇವರಲ್ಲಿ ನಾಲ್ಕು ಮಂದಿ ಈಜಾಡುವ ವೇಳೆ ನೀರು ಪಾಲಾಗಿದ್ದರು.

ನಾಲ್ವರು ಬಾಲಕರು ಸುರತ್ಕಲ್ ಮಾರುಕಟ್ಟೆ ಬಳಿ ಅವಿಲ್ ಮಿಲ್ಕ್ ಕುಡಿದು ಬಳಿಕ ರಿಕ್ಷಾ ಪಾರ್ಕಿಂಗ್ ಬಳಿ ಬಂದಿದ್ದಾರೆ. ಆ ನಂತರ ಹಳೆಯಂಗಡಿ ಬಳಿ ತೆರಳಿದ್ದರು. 9 ಮಂದಿ ಕೂಡಾ ತೆರಳಿದ್ದು, ಇವರಲ್ಲಿ ನಾಲ್ವರು ಬಾಲಕರು ನಾಪತ್ತೆ ಹಿನ್ನಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಪ್ರಕರಣವನ್ನು ದಾಖಲಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ನಾಲ್ವರು ನೀರುಪಾಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶವವನ್ನು ಹೊರತೆಗೆಯುವ ಕಾಯ೵ಕ್ಕೆ ಇಳಿದಿದ್ದು, ನಾಲ್ವರ ಶವ ಪತ್ತೆಯಾಗಿದೆ.

ಪೋಷಕರ ಮುಗಿಲುಮುಟ್ಟಿದ ಆಕ್ರಂದನ: ವಿದ್ಯಾರ್ಥಿಗಳು ಶವಪತ್ತೆಯಾಗಿದ್ದು, ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನಾಲ್ಕು ಶವಗಳನ್ನು ವೆನ್ಲಾಕ್ ಶವಗಾರಾದಲ್ಲಿರಿಸಲಾಗಿದ್ದು, ಇಂದು ಬೆಳಗ್ಗೆ ಮೃತದ ಮರಣೋತ್ತರ ಪರೀಕ್ಷೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article