ಬಿಜೆಪಿಯವರು ನಮ್ಮ ಹಣವನ್ನು ಬ್ಯಾಂಕ್ ಗಳಿಂದ ಕದಿಯುತ್ತಿದ್ದಾರೆ; ಬಿಜೆಪಿಯಿಂದ ಸರ್ವಾಧಿಕಾರಿ ಧೋರಣೆ: ಕಾಂಗ್ರೆಸ್
Thursday, February 22, 2024
ನವದೆಹಲಿ: ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಬಿಜೆಪಿಯವರು ನಮ್ಮ ಹಣವನ್ನು ಬ್ಯಾಂಕ್ ಗಳಿಂದ ಕದಿಯುತ್ತಿದ್ದಾರೆ ಎಂದು ದೂರಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೂ ಕೂಡಾ ಈ ದೇಶವನ್ನು ಆಳಿದ್ದೇವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಅಥವಾ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ರೀತಿಯ ಅನುಭವವಾಗಿದ್ದರೆ, ಅಂತಹ ಯಾವುದೇ ಉದಾಹರಣೆ ಇದ್ದರೆ ಬಿಜೆಪಿ ತೋರಿಸಬಹುದು ಎಂದರು.
ಬಿಜೆಪಿ ಪಕ್ಷವಾಗಿ ಯಾವುದೇ ಆದಾಯ ತೆರಿಗೆ ಕೊಟ್ಟಿದೆಯೇ ಎಂದು ಪ್ರಶ್ನಿಸಿದ ಅವರು, ಇದು ಸ್ಪಷ್ಟವಾಗಿ ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಮೌಲ್ಯಗಳ ಮೇಲಿನ ದಾಳಿಯಾಗಿದೆ.ಅವರು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ಸರ್ವಾಧಿಕಾರದ ಉದಾಹರಣೆಯಾಗಿದೆ ಎಂದು ಟೀಕಿಸಿದರು.