ದುಬೈನಲ್ಲಿ ನಡೆದ 'ಯಕ್ಷ ಪ್ರೀಮಿಯರ್ ಲೀಗ್-2024' ಕ್ರಿಕೆಟ್ ಪಂದ್ಯಾಟ: ವಿದವರ್ ಬಾಯ್ಸ್ ಚಾಂಪಿಯನ್

ದುಬೈನಲ್ಲಿ ನಡೆದ 'ಯಕ್ಷ ಪ್ರೀಮಿಯರ್ ಲೀಗ್-2024' ಕ್ರಿಕೆಟ್ ಪಂದ್ಯಾಟ: ವಿದವರ್ ಬಾಯ್ಸ್ ಚಾಂಪಿಯನ್

ದುಬೈ : ದುಮೆಖ್ (Dumec) ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಯಕ್ಷ ಯೋಧಸ್ ನ ಮೂರನೇ ವರ್ಷದ ಯಕ್ಷ ಪ್ರೀಮಿಯರ್ ಲೀಗ್-2024 (YPL -2024) ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 25 ರಂದು ಅಜ್ಮಾನ್ ನ ಒವಲ್ ಗ್ರೌಂಡ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಹತ್ತು ತಂಡಗಳ ಆಟಗಾರರೊಂದಿಗೆ ಆದಿತ್ಯ ದಿನೇಶ್ ಶೆಟ್ಟಿ ಕ್ರೀಡಾ ಜ್ಯೋತಿಯನ್ನು ಹಿಡಿದುಕೊಂಡು ಮೈದಾನದಲ್ಲಿ ಸುತ್ತು ಬರುವ ಕ್ರೀಡಾ ಕಾರ್ಯಕ್ರಮ ಆರಂಭಗೊಂಡಿತು. ನಂತರ ವಿವಿಧ ಕ್ಷೇತ್ರದ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಆರ್.ಕೆ.ಟೂರ್ಸ್ ಅಂಡ್ ಟ್ರಾವಲ್ಸ್ ನ ಮಾಲಕರಾದ ಮಾದವ ನಾಯ್ಕ್ ಅಡ್ಯಾರ್, ನಿವೃತ ಬ್ಯಾಂಕ್ ಮೆನಜರ್ ಕೃಷ್ಣ ಅಡ್ಯಂತಾಯ, ಹ್ಯಾವಿ ಟ್ರಾನ್ಸ್ ಫೋರ್ಟ್ ನ ಮಾಲಕರಾದ ಅನಿಲ್ ಶೆಟ್ಟಿ, ಯಕ್ಷ ಯೋಧಸ್ ನ ದಿನೇಶ್ ಶೆಟ್ಟಿ ಕೊಟ್ಟಿಂಜರವರು ದೀಪ ಬೆಳಗಿಸಿ ಕ್ರಿಕೆಟ್ ಪಂದ್ಯಾಟಕ್ಕೆ ಶುಭವನ್ನು ಹಾರೈಸಿದರು.









ನಂತರ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಹತ್ತು ತಂಡಗಳಾದ ವಿದವರ್ ಬಾಯ್ಸ್, ಟೀಮ್ ಎಲಿಗೆಂಟ್ ಮಂಗಳೂರು, ಕಟೀಲ್ ಫ್ರೆಂಡ್ಸ್, ಶ್ರೀ ಕಟೀಲ್,ಫ್ರೆಂಡ್ಸ್ ಉಡುಪಿ, ಯಕ್ಷ ಯೋಧಸ್ A, ಯಕ್ಷ ಯೋಧಸ್ B, ಸೀಬಾಯ್ಸ್, ಗಹನ್ ಮಂಗಳೂರು ರಾಕರ್ಸ್, ಡೀಜೆ ನವೀನ್ ಮಂಗಳೂರು ಆಡಿ ಆಟದ ಪೈಪೋಟಿಯನ್ನು ತೋರಿಸಿದರು. ಕೊನೆಗೆ ವಿದವರ್ ಬಾಯ್ಸ್ ಚಾಂಪಿಯನ್ ಪಟ್ಟವನ್ನು ಅಲಂಕಾರಿಸಿದರೆ ಟೀಮ್ ಎಲಿಗೆಂಟ್ ಮಂಗಳೂರು ತಂಡವು ರನ್ನರ್ಸ್ ಪಟ್ಟವನ್ನು ಅಲಂಕರಿಸಿದ್ದರು.ಅಂತಿಮ ಆಟದ ಪಂದ್ಯ ಶ್ರೇಷ್ಠನಾಗಿ ಶಾಬುದ್ದಿನ್ (ವಿದವರ್ ಬಾಯ್ಸ್),ಅತ್ಯುತ್ತಮ ಬ್ಯಾಟರ್ಸ್ ಬಾತಿಸಂ (ವಿದವರ್ ಬಾಯ್ಸ್),ಅತ್ಯುತ್ತಮ ಬೌಲರ್‌ ನೀಯಝ್ (ಟೀಮ್ ಎಲಿಗೆಂಟ್),ಸರಣಿ ಶ್ರೇಷ್ಠನಾಗಿ ಬೆರೋಜ್ (ವಿದವರ್ ಬಾಯ್ಸ್),ಅತ್ಯುತ್ತಮ ಮೌಲ್ಯಯುತ ಆಟಗಾರನಾಗಿ ಶಾಬುದೀನ್ (ವಿದವರ್ ಬಾಯ್ಸ್)ನಾಗಿ ಆಯ್ಕೆಯಾದರು.

ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಜೇತ ಗಳಿಸಿದ ತಂಡಗಳಿಗೆ ಉತ್ತಮ ಆಟದ ಪ್ರದರ್ಶನ ನೀಡಿದ ಆಟಗಾರರಿಗೆ ಟ್ರೋಫಿ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ದುಬೈಯ ಉದ್ಯೋಗಿ ಲಿತೇಸ್ ಕುಮಾರ್ ಕೆ.ಸಿ.,ಯಕ್ಷ ಗುರು ಶೇಖರ್ ಶೆಟ್ಟಿಗಾರ್,ದಿನೇಶ್ ಕೆ ಕೊಟ್ಟಿಂಜ,ಸಂದೀಪ್ ಶೆಟ್ಟಿ ಕೊಟ್ಟಿಂಜ, ಬಾಲಕೃಷ್ಣ ಶೆಟ್ಟಿ ಮಾಡುರು ಗುತ್ತು ಉಪಸ್ಥಿತರಿದ್ದರು.

ಯಕ್ಷ ಯೋಧಸ್ ನ ಸಂಸ್ಥೆಯ ಪದಾಧಿಕಾರಿಗಳದ ಗಗನ್ ಶೆಟ್ಟಿ, ಪ್ರಖ್ಯತ್ ಶೆಟ್ಟಿ,ವಿಕ್ಕಿ ಶೆಟ್ಟಿ,ವಸಂತ ಶೆಟ್ಟಿ, ಜಯನಂದ ಪಕಳ,ಬಾಲಕೃಷ್ಣ ಶೆಟ್ಟಿಗಾರ್,ಕೌಶಿಕ್ ಶೆಟ್ಟಿ,ಪ್ರಥಿತ್,ಜೀವನ್ ಶೆಟ್ಟಿ,ಶರತ್ ಕುಡ್ಲ,ಭಾಸ್ಕರ ನೀರುಮಾರ್ಗರವರು ಕ್ರಿಕೆಟ್ ಪಂದ್ಯಾಟದ ಯಶಸ್ವಿಗೆ ಸಹಕರಿಸಿದರು. ಸಂತೋಷ್ ಶೆಟ್ಟಿ ಪೊಳಲಿ ಮತ್ತು ಶಿವ ಪ್ರಸಾದ್ ಶೆಟ್ಟಿಯವರು ಉದ್ಘಾಟನಾ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Ads on article

Advertise in articles 1

advertising articles 2

Advertise under the article