ವಿಟ್ಲ ಸಮೀಪದ ಪರಿಯಲ್ತಡ್ಕದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಚರ್ಚ್ ಪಾದ್ರಿ; ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಸೇವೆಯಿಂದ ವಜಾ

ವಿಟ್ಲ ಸಮೀಪದ ಪರಿಯಲ್ತಡ್ಕದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಚರ್ಚ್ ಪಾದ್ರಿ; ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಸೇವೆಯಿಂದ ವಜಾ

ಮಂಗಳೂರು: ದಕ್ಷಿಣ ಕನ್ನಡದ ಪರಿಯಲ್ತಡ್ಕ ಗ್ರಾಮದಲ್ಲಿ ಚರ್ಚಿಯೊಂದರ   ಪಾದ್ರಿಯೊಬ್ಬರು ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಸೇವೆಯಿಂದ ವಜಾಗಿಳಿಸಲಾಗಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪರಿಯಲ್ತಡ್ಕದ ಮಣೆಲದಲ್ಲಿರುವ ಕ್ರೈಸ್ಟ್ ದಿ ಕಿಂಗ್ ಪ್ಯಾರಿಷ್‌ನ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ಅವರು ಫೆಬ್ರವರಿ 29 ರಂದು ಆಶೀರ್ವಾದಕ್ಕಾಗಿ ಮನೆಗೆ ಬಂದ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಂಪತಿ ಗ್ರೆಗೊರಿ ಮತ್ತು ಫಿಲೋಮಿನಾ ಮತ್ತು ಪಾದ್ರಿಯ ನಡುವೆ ಭಿನ್ನಾಭಿಪ್ರಾಯಗಳಿದ್ದವು ಮತ್ತು ಅವರ ಮನೆಗೆ ಭೇಟಿ ನೀಡಿದಾಗ ಇಬ್ಬರ ನಡುವೆ ಗಲಾಟೆ ನಡೆದಿದು, ಈ ವೇಳೆ ಪಾದ್ರಿ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ಸಂಬಂಧ ದೃದ್ಧ ದಂಪತಿ ದೂರು ನೀಡಿದ್ದಾರೆ. ಆದರೆ ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಘಟನೆಯಿಂದ ತೀವ್ರ ದುಃಖವಾಗಿದ್ದು, ತಕ್ಷಣದ ಪ್ರತಿಕ್ರಿಯೆಯಾಗಿ ಸಂಬಂಧಪಟ್ಟ ಪಾದ್ರಿಯನ್ನು ಕ್ರೈಸ್ಟ್ ಕಿಂಗ್ ಚರ್ಚ್‌ನ ಧಾರ್ಮಿಕ ಸೇವೆಯಿಂದ ವಜಾಗೊಳಿಸಲಾಗುವುದು ಮತ್ತು ಆಧ್ಯಾತ್ಮಿಕ ಅಗತ್ಯಗಳಿಗೆ ಸೇವೆ ಸಲ್ಲಿಸಲು ಬೇರೆಯವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

"ಧರ್ಮಾಧಿಕಾರವು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತದೆ ಮತ್ತು ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾದ ವಿಚಾರಣೆಯ ಹೊರತಾಗಿ, ಮಂಗಳೂರು ಧರ್ಮಪ್ರಾಂತ್ಯವು ನ್ಯಾಯಯುತವಾಗಿ ವಿಚಾರಣೆಯನ್ನು ಸಹ ಪ್ರಾರಂಭಿಸುತ್ತದೆ" ಅವರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article