ಕರ್ನಾಟಕದಲ್ಲಿ 2 ಹಂತದಲ್ಲಿ ನಡೆಯಲಿದೆ ಲೋಕಸಭಾ ಚುನಾವಣೆ: ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ....

ಕರ್ನಾಟಕದಲ್ಲಿ 2 ಹಂತದಲ್ಲಿ ನಡೆಯಲಿದೆ ಲೋಕಸಭಾ ಚುನಾವಣೆ: ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ....

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದರು. 

ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. 

ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. 

ಏಪ್ರಿಲ್ 26, ಮೇ 7ರಂದು ಮತದಾನ

ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

ಚಿತ್ರದುರ್ಗ

ಉಡುಪಿ-ಚಿಕ್ಕಮಗಳೂರು

ದಕ್ಷಿಣ ಕನ್ನಡ

ಹಾಸನ

ತುಮಕೂರು

ಚಿಕ್ಕಬಳ್ಳಾಪುರ

ಕೋಲಾರ

ಮಂಡ್ಯ

ಮೈಸೂರು-ಕೊಡಗು

ಚಾಮರಾಜನಗರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಬೆಂಗಳೂರು ಕೇಂದ್ರ

ಮೇ 7ರಂದು ಎಲ್ಲೆಲ್ಲಿ ಮತದಾನ?

ಬೆಳಗಾವಿ

ಬಳ್ಳಾರಿ

ಚಿಕ್ಕೋಡಿ

ಹಾವೇರಿ-ಗದಗ

ಕಲಬುರಗಿ

ಬೀದರ್​

ಹುಬ್ಬಳಿ – ಧಾರವಾಡ

ಕೊಪ್ಪಳ

ರಾಯಚೂರು

ಉತ್ತರ ಕನ್ನಡ

ದಾವಣಗೆರೆ

ಶಿವಮೊಗ್ಗ

ಬಾಗಲಕೋಟೆ

ವಿಜಯಪುರ

Ads on article

Advertise in articles 1

advertising articles 2

Advertise under the article