ಮಂಗಳೂರು ನೇತ್ರಾವತಿ ನದಿಗೆ ಹಾರಿ ತಾಯಿ-ಮಗು ಆತ್ಮಹತ್ಯೆ!
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಗೆ ಮಗುವಿನೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಅಡ್ಯಾರ್ ಪದವು ನಿವಾಸಿ ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಹಾಗು ಒಂದು ವರ್ಷದ ಮಗು ದಿಯಾಂಶ್ ಎಂದು ಗುರುತಿಸಲಾಗಿದೆ. ತಾಯಿ ಹಾಗು ಮಗುವಿನ ಮೃತದೇಹ ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ನಾಪತ್ತೆಯಾಗಿದ್ದ ತಾಯಿ ಮಗು ಸಾಮಾಜಿಕ ಜಾಲತಾಣದ ಮೂಲಕ ಹುಡುಕಾಟಕ್ಕೆ ಸಂಬಂಧಿಕರು ಮನವಿ ಮಾಡಿದ್ದರು. ಶುಕ್ರವಾರವಷ್ಟೇ 1 ವರ್ಷದ ಮಗುವಿನ ಹುಟ್ಟುಹಬ್ಬ ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಿದ್ದರು.
ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಮಧ್ಯಾಹ್ನ ಬಳಿಕ ಆಕೆಯ ಮನೆಯವರು ಬಂದು ವಿಚಾರಿಸಿದ್ದು, ಆ ಬಳಿಕ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ನಿನ್ನೆ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರ ಬಹುದೆಂದು ಶಂಕಿಸಲಾಗಿದೆ.