ಕಾರ್ಕಳದಲ್ಲಿ ಪ್ರಚಾರದ ಮಧ್ಯೆ ದೇವಸ್ಥಾನ, ಚರ್ಚಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ; ವಿಶೇಷ ಪೂಜೆ ಸಲ್ಲಿಕೆ
ಕಾರ್ಕಳ: ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಅವರು ಗುರುವಾರ ಪ್ರಚಾರದ ಮಧ್ಯೆ ದೇವಸ್ಥಾನ, ಚರ್ಚಿಗೆ ಭೇಟಿ ನೀಡಿದರು.
ಶ್ರೀ ವೆಂಕಟರಮಣ ದೈವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಜಯಪ್ರಕಾಶ್ ಹೆಗ್ಡೆ ಅವರು ಇದಕ್ಕೂ ಮೊದಲು ಕಾರ್ಕಳ ಅತ್ತೂರಿನ ಸೆಂಟ್ ಲಾರೆನ್ಸ್ ಚರ್ಚ್ ಗೆ ಭೇಟಿ ನೀಡಿ ಧರ್ಮ ಗುರುಗಳಿಂದ ಆಶೀರ್ವಾದ ಪಡೆದರು.
ಈ ಮಧ್ಯೆ ಜಯಪ್ರಕಾಶ್ ಹೆಗ್ಡೆ ಅವರು ಭ. ಶ್ರೀ ಚಂದ್ರಪ್ರಭ ಸ್ವಾಮಿ ಬಸದಿಗೆ ಹಾಗು ಮಾರಿಯಮ್ಮ ದೈವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದಕ್ಕೂ ಮೊದಲು ಕಾರ್ಕಳದ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಜರಿದ್ದರು.
ಇದಕ್ಕೂ ಮೊದಲು ಕಾರ್ಕಳದ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಮನಿಯಾಲು ನೇತೃತ್ವದಲ್ಲಿ ಬ್ರಹ್ಮಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಶ್ರೀ ವಿಜ್ಞೇಶ ಕಿಣಿ ಹಾಗೂ ಇತರೆ ಮುಂಚೂಣಿ ಘಟಕದ ಅಧ್ಯಕ್ಷರು ಸದಸ್ಯರು ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.