ದುಬೈ ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಸಾಥ್ ನೀಡಿದ ಗಲ್ಫ್ ಕರ್ನಾಟಕ ಕುಟುಂಬ

ದುಬೈ ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಸಾಥ್ ನೀಡಿದ ಗಲ್ಫ್ ಕರ್ನಾಟಕ ಕುಟುಂಬ

ದುಬೈ: ಯುಎಇ ಇತಿಹಾಸದಲ್ಲೇ ಎ.16ರಂದು ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ ನೆರೆಯಿಂದ ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರುವುದು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ನಡೆಸಿದೆ. 


ನಮ್ಮ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ನಮ್ಮ ಗಲ್ಫ್ ಕರ್ನಾಟಕ ಕುಟುಂಬ (ಗಲ್ಫ್ ಗೆಳೆಯರು & ಗೆಳತಿಯರು) ವತಿಯಿಂದ ಭಾನುವಾರ 200 ಬಿರಿಯಾನಿ ಮತ್ತು ಕುಡಿಯುವ ನೀರಿನ ಬಾಟಲ್ ಅನ್ನು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ಗಲ್ಫ್ ಗೆಳೆಯರು ಬಳಗ ದ ತಂಡ ದವರು ತಲುಪಿಸಿದರು

Ads on article

Advertise in articles 1

advertising articles 2

Advertise under the article