ಮಣಿಪಾಲದ ಮಾಹೆ, ಕೆಎಂಸಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚನೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ
Tuesday, April 16, 2024
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಮಂಗಳವಾರ ಉಡುಪಿ ಹಾಗು ಮಣಿಪಾಲ ಸುತ್ತಮುತ್ತ ಚುನಾವಣಾ ಪ್ರಚಾರ ಕಾರ್ಯ ನಡೆಸುವ ಮೂಲಕ ಮತಯಾಚನೆ ನಡೆಸಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಾಹೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಮತ ಯಾಚನೆ ಮಾಡಿದ ಜಯಪ್ರಕಾಶ್ ಹೆಗ್ಡೆಯವರು, ಕೆಎಂಸಿ ಮಣಿಪಾಲದ ವಿವಿಧ ವಿಭಾಗಗಳಲ್ಲಿ ಮತ ಯಾಚನೆ ಮಾಡಿದರು.
ಬಳಿಕ ಮಣಿಪಾಲದ ಬೆಸ್ಟ್ ಸೆಲ್ಲರ್ ಗಾರ್ಮೆಂಟ್ಸ್ ನಲ್ಲಿ ಕಾರ್ಮಿಕರ ಬಳಿ ತೆರಳಿ ಮತಯಾಚನೆ ನಡೆಸಿದ್ದು, ಇದ್ದಕ್ಕೂ ಮೊದಲು ಕೆಮ್ಮಣ್ಣು, ನೇಜಾರಿನಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಮುಖಂಡರು ಹಾಜರಿದ್ದರು.