ಚಿಕ್ಕಮಗಳೂರಿನಲ್ಲಿ ಮತಭೇಟೆ  ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ; ಹಲವೆಡೆ ಭರ್ಜರಿ ಪ್ರಚಾರ

ಚಿಕ್ಕಮಗಳೂರಿನಲ್ಲಿ ಮತಭೇಟೆ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ; ಹಲವೆಡೆ ಭರ್ಜರಿ ಪ್ರಚಾರ

ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಚಿಕ್ಕಮಗಳೂರಿನಲ್ಲಿ ಮತಭೇಟೆ  ಆರಂಭಿಸಿದ್ದು, ವಿವಿಧೆಡೆ ಮತಯಾಚನೆ ನಡೆಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಿಂದಿಗೆರೆ ಗ್ರಾಮದಲ್ಲಿ ಜಯಪ್ರಕಾಶ್ ಹೆಗ್ಡೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ತಮ್ಮಯ್ಯ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿ ಶಾಂತೆಗೌಡ, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರು ಸಖರಾಯಪಟ್ಟಣ ಹೋಬಳಿ ಭಾಗದ  ಕಾಂಗ್ರೆಸ್ ನ ಎಲ್ಲಾ ಘಟಕದ ಅಧ್ಯಕ್ಷರುಗಳು, ಸದಸ್ಯರು ,ಕಾರ್ಯಕರ್ತರು   ಭಾಗವಹಿಸಿದ್ದರು.







ಇದಕ್ಕೂ ಮೊದಲು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣ  ಹೋಬಳಿಯ ಕಳಾಸಪುರ   ಮತ್ತು ಈಶ್ವರಹಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಳಾಸಪುರ ಗ್ರಾಮದಲ್ಲಿ ಜಯಪ್ರಕಾಶ್ ಹೆಗ್ಡೆ  ಮತಯಾಚನೆ ಮಾಡಿ ತನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ತಮ್ಮಯ್ಯ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿ ಶಾಂತೆಗೌಡರವರು, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರು  ಸಖರಾಯಪಟ್ಟಣ ಹೋಬಳಿ ಭಾಗದ ಕಾಂಗ್ರೆಸ್ ನ ಎಲ್ಲಾ ಘಟಕದ  ಅಧ್ಯಕ್ಷರುಗಳು, ಸದಸ್ಯರು , ಕಾರ್ಯಕರ್ತರು  ಭಾಗವಹಿಸಿದ್ದರು. 

Ads on article

Advertise in articles 1

advertising articles 2

Advertise under the article