ಕಾಪು ಕ್ಷೇತ್ರದ ವಿವಿಧೆಡೆ ತೆರೆಳಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ; ಕ್ಷೇತ್ರದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ
Thursday, April 18, 2024
ಕಾಪು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಕಾಪು ಕ್ಷೇತ್ರದ ವಿವಿಧೆಡೆ ತೆರೆಳಿ ಮತಯಾಚನೆ ಮಾಡಿದರು.
ಕಾಪು ಕ್ಷೇತ್ರದ ಕುಕ್ಕೆಹಳ್ಳಿಯ ಓಜೋನ್ ಕ್ಯಾಷ್ಯು ಇಂಡಸ್ಟ್ರಿಗೆ ಕಾರ್ಯಕರ್ತರೊಂದಿಗೆ ತೆರಳಿದ ಉಜಯಪ್ರಕಾಶ್ ಹೆಗ್ಡೆ ಅಲ್ಲಿನ ಕಾರ್ಮಿಕರೊಂದಿಗೆ ಈ ಬಾರಿ ತಮಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಹೆಗ್ಡೆಯವರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಪೆರ್ಡೂರು ಸಮೀಪದ ಬುಕ್ಕೆ ಗುಡ್ಡೆಯಲ್ಲಿರುವ ಸಿಂಧೂ ಕ್ಯಾಷ್ಯೂ ಇಂಡಸ್ಟ್ರೀಸ್ ನಲ್ಲಿ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಜರಿದ್ದರು. ಬಳಿಕ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ದರರ್ಶನ ಪಡೆದರು.