ಕೋಟೇಶ್ವರದಲ್ಲಿ ಜಯಪ್ರಕಾಶ್ ಹೆಗ್ಡೆ ಭರ್ಜರಿ ಚುನಾವಣಾ ಪ್ರಚಾರ; ಹಲವು ನಾಯಕರು ಭಾಗಿ

ಕೋಟೇಶ್ವರದಲ್ಲಿ ಜಯಪ್ರಕಾಶ್ ಹೆಗ್ಡೆ ಭರ್ಜರಿ ಚುನಾವಣಾ ಪ್ರಚಾರ; ಹಲವು ನಾಯಕರು ಭಾಗಿ

 


ಕುಂದಾಪುರ: ಕುಂದಾಪುರ ತಾಲೂಕಿನ‌ ಕೋಟೇಶ್ವರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಭಾಗವಹಿಸಿದ್ದರು.




ಬಿಜೆಪಿ ಸಂಸದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಯಾವುದೇ ರೀತಿಯಲ್ಲೂ ಅಭಿವೃದ್ಧಿಯ ಕಂಡಿಲ್ಲ. ಕೇವಲ ಅಧಿಕಾರವನ್ನಷ್ಟೇ ಈ ಹಿಂದಿನ ಸಂಸದರು ಅನುಭವಿಸಿದ್ದಾರೆ. ಈ ಬಾರಿ ಜನಪರ ಅಭಿವೃದ್ಧಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಭಂಡಾರಿ,  ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮರೋಳಿ, ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸೇರಿದಂತೆ ಹಲವರು ಹಾಜರಿದ್ದರು. 

Ads on article

Advertise in articles 1

advertising articles 2

Advertise under the article