ನೇಹಾ ಹತ್ಯೆ ಪ್ರಕರಣ; ಕರ್ನಾಟಕದಲ್ಲಿನ ಕಾನೂನು, ಸುವ್ಯವಸ್ಥೆ ಬಗ್ಗೆ ಇಡೀ ರಾಷ್ಟ್ರ ಆತಂಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ನೇಹಾ ಹತ್ಯೆ ಪ್ರಕರಣ; ಕರ್ನಾಟಕದಲ್ಲಿನ ಕಾನೂನು, ಸುವ್ಯವಸ್ಥೆ ಬಗ್ಗೆ ಇಡೀ ರಾಷ್ಟ್ರ ಆತಂಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಶಿರಸಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಇಡೀ ರಾಷ್ಟ್ರ ಆತಂಕಗೊಂಡಿದೆ. ಕಾಂಗ್ರೆಸ್ ಸರ್ಕಾರ ಹತಾಶೆಯಿಂದ ರಾಜ್ಯವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದರು.

ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ,'ಕರ್ನಾಟಕದಲ್ಲಿ ಹೆಣ್ಣು ಮಗಳೊಬ್ಬಳ ಹತ್ಯೆಯಿಂದ ಇಡೀ ದೇಶ ಆತಂಕಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ಗೊಂಡಿದ್ದಾರೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ವಾಸವಾಗುವ ಬಗ್ಗೆ ಅವರ ಪೋಷಕರು ದಿಗಿಲುಗೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನ ಬದ್ಧತೆ ಕಾರಣ, ಕಾಲೇಜ್ ಕ್ಯಾಂಪಸ್ ನಲ್ಲಿ ಹೇಗೆ ಹತ್ಯೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಅವರು ವೋಟ್ ಬ್ಯಾಂಕ್ ಗಾಗಿ ಕೆಲವು ದಿನಗಳಲ್ಲಿಯೇ ಆರೋಪಿಯನ್ನು ರಕ್ಷಿಸಲಿದ್ದಾರೆ ಎಂದರು.

ಕರ್ನಾಟಕವನ್ನು ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಬ್ಯೂಸಿಯಾಗಿದೆ. ಅಪರಾಧವನ್ನು ನಿಯಂತ್ರಣಕ್ಕೆ ತರುವ ಬದಲು, ಕಾಂಗ್ರೆಸ್ ಸಮಾಜ ಮತ್ತು ದೇಶ ವಿರೋಧಿ ಮನಸ್ಥಿತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.

Ads on article

Advertise in articles 1

advertising articles 2

Advertise under the article