ನಾಳೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ನಾಮಪತ್ರ ಸಲ್ಲಿಕೆ; ಪಾದಯಾತ್ರೆ-ಮೆರವಣಿಗೆಯ ವಿವರ ಇಲ್ಲಿದೆ....
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪದ್ಮರಾಜ್ ಆರ್. ಪೂಜಾರಿ ಅವರು (03-04-2024 ) ಬುಧವಾರ ಬೆಳಿಗ್ಗೆ 09:30 ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ದ್ವಾರದ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪಾದಯಾತ್ರೆಯ ಮೂಲಕ ಸಾಗಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಸುವ ಮೊದಲು ಚರ್ಚ್, ಮಸೀದಿ, ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ಬೆಳಗ್ಗೆ 9:30ಕ್ಕೆ ಕುದ್ರೋಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಅಳಕೆ, ನ್ಯೂಚಿತ್ರಾ ಟಾಕೀಸ್, ಉಷಾ ಕಿರಣ್ ಹೋಟೆಲ್ (ಎಡ),ಟೆಂಪಲ್ ಸ್ಕ್ವಾರ್, ಜಿಎಚ್‌ಎಸ್ ರೋಡ್(ಬಲ), ಗಣಪತಿ ಹೈಸ್ಕೂಲ್ ರಸ್ತೆ, ಓಲ್ಡ್ ಐಡಿಯಲ್ ಪಾರ್ಲರ್, ಮಂಗಳೂರು ವಿವಿ ಕಾಲೇಜು ರೋಡ್, ಕ್ಲಾಕ್ ಟವರ್, ಟೌನ್ ಹಾಲ್ ರಸ್ತೆಯ ಮೂಲಕ ಆಗಮಿಸಿ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಸಮಾವೇಶಗೊಳ್ಳಲಿದೆ. ಅಲ್ಲಿಂದ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಪದ್ಮರಾಜ್ ನಾಮಪತ್ರ ಸಲ್ಲಿಸಲಾಗುವುದು.