ಕಾಂಗ್ರೆಸ್ ಗೆದ್ದರೆ ಗ್ರಾಪಂನಿಂದ ತೊಡಗಿ ದೆಹಲಿವರೆಗೆ  ಪಾಕ್ ಪರ ಘೋಷಣೆ ಕೇಳಬೇಕಾಗುತ್ತೆ: ಪ್ರಜ್ವಲ್ ರೇವಣ್ಣ

ಕಾಂಗ್ರೆಸ್ ಗೆದ್ದರೆ ಗ್ರಾಪಂನಿಂದ ತೊಡಗಿ ದೆಹಲಿವರೆಗೆ ಪಾಕ್ ಪರ ಘೋಷಣೆ ಕೇಳಬೇಕಾಗುತ್ತೆ: ಪ್ರಜ್ವಲ್ ರೇವಣ್ಣ

ಹಾಸನ: ಹಾಸನದಲ್ಲಿ ಈ ಬಾರಿಯೂ ಕಾಂಗ್ರೆಸ್​ ಅವರಪ್ಪನಾಣೆಗೂ ನೂರಕ್ಕೆ ನೂರು ಗೆಲ್ಲಲ್ಲ. ಒಂದು ವೇಳೆ ಗೆದ್ದರೂ ಗ್ರಾಮ ಪಂಚಾಯಿತಿಯಿಂದ ತೊಡಗಿ ದೆಹಲಿ ವರೆಗೆ ಪಾಕಿಸ್ತಾನ ಪರ ಘೋಷಣೆ ಕೇಳಬೇಕಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 

ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಬಿಜೆಪಿ ಜೆಡಿಎಸ್ ನಾಯಕರ ಜಂಟಿ ಸಭೆ ನಡೆಯಿತು. ಬಳಿಕ ಮಾತನಾಡಿದ ಪ್ರಜ್ವಲ್, ಅಕಸ್ಮಾತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಪಾಕ್​ ಪರ ಘೋಷಣೆ ಕೇಳಬೇಕಾಗುತ್ತದೆ ಎಂದರು.

ಈಗ ನಡೆಯುತ್ತಿರುವುದು ಲೋಕಸಭೆ ಚುನಾವಣೆ. ಇದು ದೇಶದ ಚುನಾವಣೆ. ದೇಶ ಉಳಿಯಬೇಕೋ ಹಾಳಾಗಬೇಕೋ ಎಂಬುದು ಇನ್ನು 12 ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರಿಗೆ ಎರಡು ಸಾವಿರ ಕೊಟ್ಟು ಒಲಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ಇದೆ ಎಂದರು. ಮಹಿಳೆಯರನ್ನು ಉದ್ದೇಶಿಸಿ, ‘ನಿಮಗೆ ಎರಡು ಸಾವಿರ ಕೊಟ್ಟು ನಿಮ್ಮ ಗಂಡಂದಿರಿಂದ ಸಾವಿರಾರು ರೂ. ವಸೂಲಿ ಮಾಡ್ತಾರೆ. ಒಂದೇ ವರ್ಷದಲ್ಲಿ ‘ಎಣ್ಣೆ’ (ಮದ್ಯ) ಬೆಲೆಯನ್ನು ನಾಲ್ಕು ಬಾರಿ ಜಾಸ್ತಿ ಮಾಡಿದ್ದಾರೆ’ ಎಂದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ‘ಮಾತು ನಿಲ್ಲಿಸಿ ಪ್ರಜ್ವಲ್, ಅದು ಕೊಬ್ಬರಿ ಎಣ್ಣೆ ಅಂದುಕೊಂಡುಬಿಟ್ಟಾರು ಜನ’ ಎಂದರು. ಬಳಿಕ ಮಾತು ಮುಂದುವರಿಸಿದ ಪ್ರಜ್ವಲ್, ‘ಇಲ್ಲಾ ಅದು ರಾತ್ರಿ ತೆಗೆದುಕೊಳ್ಳುವ ‘ಎಣ್ಣೆ’. ಅದರ ಬೆಲೆ ನಾಲ್ಕು ಬಾರಿ ಜಾಸ್ತಿ ಆಗಿದೆ’ ಎಂದರು.

Ads on article

Advertise in articles 1

advertising articles 2

Advertise under the article