ಉಡುಪಿ, ಮಣಿಪಾಲ, ಬ್ರಹ್ಮಾವರ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚನೆ ನಡೆಸಿದ ಜಯಪ್ರಕಾಶ್ ಹೆಗ್ಡೆ
Tuesday, April 16, 2024
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಮಂಗಳವಾರ ಉಡುಪಿ, ಮಣಿಪಾಲ, ಬ್ರಹ್ಮಾವರ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚನೆ ನಡೆಸಿದರು.
ಬ್ರಹ್ಮಾವರದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಹೆಗ್ಡೆ, ಜನಪರ ಅಭಿವೃದ್ಧಿ ಕಾರ್ಯಗಳಿಗಾಗಿ, ಉತ್ತಮ ಆಡಳಿತ ನಡೆಸಲು ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ, ನಾನು ನಿಮ್ಮ ಎಲ್ಲ ರೀತಿಯ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಬಳಿಕ ಮಣಿಪಾಲದ ಖ್ಯಾತ ಪತ್ರಿಕೋದ್ಯಮಿ, ಮಣಿಪಾಲ ಮೀಡಿಯಾ ನೆಟ್ ವರ್ಕ್ ನ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಮತಯಾಚಿಸಿದರು. ಇದೇ ವೇಳೆ ಮಣಿಪಾಲದಲ್ಲಿರುವ ಪ್ರಸಿದ್ಧ ಮಣಿಪಾಲ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ನಂತರ ರಾಜ್ಯದ ಪ್ರತಿಷ್ಠಿತ ಸಿಲ್ಕ್ ಶೋ ರೂಮ್ ಉಡುಪಿಯ "ಜಯಲಕ್ಷ್ಮಿ ಸಿಲ್ಕ್ಸ್"ನಲ್ಲಿ ಮತಯಾಚಿಸಿದರು.