ಈ ಬಾರಿ ಕಣಕ್ಕಿಳಿದಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಎಲ್ಲಿಂದಲೋ ಪೇಮೆಂಟ್ ಬಂದಿದೆ: ಯಾರು ಪೇಮೆಂಟ್ ಮಾಡಿದ್ದಾರೆ ಎನ್ನುವುದನ್ನು ಮೇ 7ರ ನಂತರ ಹೇಳುವೆ:  ಯತ್ನಾಳ್

ಈ ಬಾರಿ ಕಣಕ್ಕಿಳಿದಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಎಲ್ಲಿಂದಲೋ ಪೇಮೆಂಟ್ ಬಂದಿದೆ: ಯಾರು ಪೇಮೆಂಟ್ ಮಾಡಿದ್ದಾರೆ ಎನ್ನುವುದನ್ನು ಮೇ 7ರ ನಂತರ ಹೇಳುವೆ: ಯತ್ನಾಳ್

 

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಎಲ್ಲಿಂದಲೋ ಪೇಮೆಂಟ್ ಬಂದಿದೆ. ಅದಕ್ಕೆ ಸ್ಪರ್ಧಿಸಿದ್ದಾರೆ' ಎಂದು ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಆರೋಪಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾರು ಪೇಮೆಂಟ್ ಮಾಡಿದ್ದಾರೆ ಎನ್ನುವುದನ್ನು ಮೇ 7ರ ನಂತರ ಹೇಳುವೆ' ಎಂದು ತಿಳಿಸಿದರು.

'ಮೊದಲು ಶಾಸಕ ವಿನಯ ಕುಲಕರ್ಣಿ ಅವರು ಸ್ವಾಮೀಜಿ ಅವರನ್ನು ಬೇಕಾಬಿಟ್ಟಿ ಬಯ್ಯುತ್ತಿದ್ದರು. ಈಗ ಹೊಗಳುತ್ತಿದ್ದಾರೆ ಎಂದರೆ ಪೇಮೆಂಟ್ ಆಗಿದೆ‘ ಎಂದೇ ಅರ್ಥ ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರು ಎಚ್ಚರಿಕೆ ನೀಡಲಿ: ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ನಿರಂತರವಾಗಿ ಹಲ್ಲೆ, ಕೊಲೆಗಳು ನಡೆದಿವೆ. ಈ ಪರಿಸ್ಥಿತಿ ಬಗ್ಗೆ ರಾಷ್ಟ್ರಪತಿ ಅವರಿಗೆ ವರದಿ ನೀಡಬೇಕು. ಜೊತೆಗೆ ಇಲ್ಲಿನ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಹಿಂದೂ‌ಗಳಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article