ಪಡುಬಿದ್ರೆಯಲ್ಲಿ ಮೇ 30ರಂದು ಅಲ್ ಫಲಾಹ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶುಭಾರಂಭ; ಯು.ಟಿ.ಖಾದರ್, ಮಧು ಬಂಗಾರಪ್ಪ ಸೇರಿದಂತೆ ಗಣ್ಯರು ಭಾಗಿ; ಅಲ್ ಫಲಾಹ್ ಅಕಾಡಮಿ ಸ್ಕೂಲ್'ನ ವಿಶೇಷತೆ ನೋಡಿ...
ಪಡುಬಿದ್ರೆ: ಪಡುಬಿದ್ರೆಯ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿ ಸ್ಕೂಲ್ ಮೇ 30ರ ಗುರುವಾರದಂದು ಶುಭಾರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ 'ಸ್ಕೂಲ್ ಚಲೋ ಈವೆಂಟ್' ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖ್ಯಾತ ಸಿನೆಮಾ ನಟ ಸುಮನ್ ತಲ್ವಾರ್, ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತ, ಮೋಟಿವೇಟರ್ ರಫೀಕ್ ಮಾಸ್ಟರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಮೇ 30ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರಗೆ ಕಾರ್ಯಕ್ರಮ ನಡೆಯಲಿದೆ. ಪಡುಬಿದ್ರಿಯ ಸುತ್ತಮುತ್ತಲಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ಉದ್ದೇಶದಿಂದ ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿ ಸ್ಕೂಲ್'ನ್ನು ಆರಂಭಿಸಲಾಗಿದೆ.
ಅಲ್ ಫಲಾಹ್ ಸ್ಕೂಲ್'ನ ವಿಶೇಷತೆ...
ಪ್ರತಿಭಾನ್ವಿತ, ನುರಿತ ಶಿಕ್ಷಕರಿಂದ ಭೋದನೆ, ಸ್ಮಾರ್ಟ್ ಕ್ಲಾಸ್ ರೂಮ್ಸ್ (Smart Classrooms), ಸೈನ್ಸ್ ಲ್ಯಾಬೊರೇಟರೀಸ್ (Science Laboratories), ಕಂಪ್ಯೂಟರ್-ರೊಬೊಟಿಕ್ಸ್ ಲ್ಯಾಬ್ಸ್ (Computer and Robotics Labs), ಮ್ಯಾಥ್ಸ್-ಇಂಗ್ಲಿಷ್ ಲ್ಯಾಬ್ಸ್(Maths and English labs), ಸಿಸಿಟಿವಿ ಕಣ್ಗಾವಲು (CCTV Surveillance), AC ಕ್ಲಾಸ್ ರೂಮ್ಸ್ (AC Classrooms) ಇದೆಲ್ಲ ಅಲ್ ಫಲಾಹ್ ಸ್ಕೂಲ್'ನಲ್ಲಿರುವ ವಿಶೇಷತೆಗಳಾಗಿವೆ.